Deuteronomy 4:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಯೆಹೋವನು ನಿಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ತನ್ನ ಸ್ವಕೀಯ ಪ್ರಜೆಯನ್ನಾಗಿ ಮಾಡಿಕೊಂಡಿರುತ್ತಾನೆ. ಕಬ್ಬಿಣವನ್ನು ಕರಗಿಸುವ ಬೆಂಕಿಯ ಕುಲುಮೆಯಂತಿದ್ದ ಈಜಿಪ್ಟಿನಿಂದ ನಿಮ್ಮನ್ನು ಎಳೆದು ತಂದು ತನ್ನ ವಿಶೇಷ ಜನಾಂಗವಾಗಿ ನಿಮ್ಮನ್ನು ತೆಗೆದುಕೊಂಡಿರುತ್ತಾನೆ. ಈಗ ನೀವು ಆತನ ಜನರಾಗಿದ್ದೀರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮನ್ನಾದರೋ ಯೆಹೋವನು ತನಗೆ ಸ್ವಂತ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತದೇಶದಿಂದ ತಪ್ಪಿಸಿದನು; ಆ ಸಂಕಲ್ಪವು ಈಗ ನೆರವೇರಿತು.
Kannada BSI Bible 2016
ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮನ್ನಾದರೋ ಯೆಹೋವನು ತನಗೆ ಸ್ವಕೀಯಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತದೇಶದಿಂದ ತಪ್ಪಿಸಿದನು; ಆ ಸಂಕಲ್ಪವು ಈಗ ನೆರವೇರಿತಲ್ಲಾ.
Kannada Bible (KNCL) BSI 2016
ಆದರೆ ನಿಮ್ಮನ್ನು ತಮ್ಮ ಸ್ವಕೀಯ ಜನರನ್ನಾಗಿಸಿಕೊಳ್ಳಲು ಸಂಕಲ್ಪಿಸಿ ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಆ ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆದುತಂದು ಇದ್ದಾರೆ ಆ ಸರ್ವೇಶ್ವರ. ಅಂತೆಯೇ ನೀವು ಇಂದಿಗೂ ಅವರ ಸ್ವಂತ ಜನರಾಗಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮನ್ನಾದರೋ ಯೆಹೋವ ದೇವರು ತಮಗೆ ಸ್ವಕೀಯ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಈಜಿಪ್ಟ್ ದೇಶದಿಂದ ಹೊರತಂದರು.