Deuteronomy 4:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀವು ಹೋಗುವ ದೇಶದಲ್ಲಿ ಬಹಳ ವರ್ಷ ಬಾಳಿದ ನಂತರ ನಿಮಗೆ ಮಕ್ಕಳೂ ಮೊಮ್ಮಕ್ಕಳೂ ಆಗುವರು. ಬಳಿಕ ನೀವು ನಿಮ್ಮ ಜೀವಿತಗಳನ್ನು ಹಾಳುಮಾಡಿಕೊಳ್ಳುವಿರಿ. ನೀವು ಎಲ್ಲಾ ಬಗೆಯ ವಿಗ್ರಹಗಳನ್ನು ಮಾಡಿಕೊಳ್ಳುವಿರಿ. ಅದು ದೇವರಿಗೆ ಬಹಳ ಕೋಪವನ್ನು ಉಂಟುಮಾಡುವುದು!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಮಕ್ಕಳನ್ನೂ ಮತ್ತು ಮೊಮ್ಮಕ್ಕಳನ್ನೂ ಪಡೆದು ಬಹುಕಾಲ ಆ ದೇಶದಲ್ಲಿದ್ದ ಮೇಲೆ ದ್ರೋಹಿಗಳಾಗಿ ಯಾವ ವಿಗ್ರಹವನ್ನಾದರೂ ಮಾಡಿಕೊಂಡು, ನಿಮ್ಮ ದೇವರಾದ ಯೆಹೋವನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ,
Kannada BSI Bible 2016
ನಿನ್ನಿಂದ ಮಕ್ಕಳೂ ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು ತರುವಾಯ ನಿಮ್ಮನ್ನು ಕೆಡಿಸಿಕೊಂಡು ಯಾವದಾದರ ರೂಪವನ್ನು ಕೆತ್ತಿದ ವಿಗ್ರಹವನ್ನು ಮಾಡಿಕೊಂಡು ನಿನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಆತನಿಗೆ ಕೋಪವನ್ನು ಎಬ್ಬಿಸಿದರೆ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದು ಬಹುಕಾಲ ಆ ದೇಶದಲ್ಲಿದ್ದ ಮೇಲೆ ದ್ರೋಹಿಗಳಾಗಿ ಯಾವ ವಿಗ್ರಹವನ್ನಾದರೂ ಮಾಡಿಕೊಂಡು ನಿಮ್ಮ ದೇವರಾದ ಯೆಹೋವನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ
Kannada Bible (KNCL) BSI 2016
“ನೀವು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆಯುವಷ್ಟು ಕಾಲ ಆ ನಾಡಿನಲ್ಲಿದ್ದು, ಯಾವುದಾದರೊಂದು ವಿಗ್ರಹವನ್ನು ಮಾಡಿಕೊಂಡು ದ್ರೋಹಿಗಳಾಗಿ ನಿಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರನ್ನು ಸಿಟ್ಟುಗೊಳಿಸಿದ್ದೇ ಆದರೆ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮಿಂದ ಮಕ್ಕಳೂ, ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು, ತರುವಾಯ ಯಾವುದಾದರೂ ಕೆತ್ತಿದ ವಿಗ್ರಹವನ್ನು ಮಾಡಿ ನಿಮ್ಮನ್ನು ಕೆಡಿಸಿಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಅವರಿಗೆ ಕೋಪಗೊಳಿಸಿದರೆ,