Deuteronomy 4:46 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೋರ್ಡನ್ ನದಿಯ ಪೂರ್ವಭಾಗದ ಬೇತ್‌ಪೆಗೋರಿನಲ್ಲಿ ಇಸ್ರೇಲ್ ಜನಸಮೂಹವು ಸೇರಿಬಂದಿದ್ದಾಗ ಮೋಶೆಯು ಈ ನಿಯಮಗಳನ್ನು ಅವರಿಗೆ ತಿಳಿಸಿದನು. ಆ ಸ್ಥಳವು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯನಾದ ಸೀಹೋನ್ ರಾಜನಿಗೆ ಸೇರಿತ್ತು. (ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಸೀಹೋನನನ್ನು ಸೋಲಿಸಿದ್ದರು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಯೊರ್ದನ್ ನದಿಯ ಆಚೆ ಬೇತ್‍ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೆಷ್ಬೋನಿನಲ್ಲಿ ವಾಸಿಸಿದರು. ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಮೋಶೆಯೂ ಮತ್ತು ಇಸ್ರಾಯೇಲರೂ ಐಗುಪ್ತದೇಶದಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.
Kannada BSI Bible 2016
ಯೊರ್ದನಿನ ಈಚೆಯಲ್ಲಿ ಬೇತ್‌ಪೇಯೋರಿಗೆ ಎದುರಾಗಿರುವ ತಗ್ಗಿನಲ್ಲಿ ಹೆಷ್ಬೋನಿನಲ್ಲಿ ವಾಸ ಮಾಡಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ ನುಡಿದ ಸಾಕ್ಷಿಗಳೂ ನಿಯಮಗಳೂ ನ್ಯಾಯಗಳೂ ಇವೇ. ಆ ಸೀಹೋನನನ್ನು ಮೋಶೆಯೂ ಇಸ್ರಾ ಯೇಲ್‌ ಮಕ್ಕಳೂ ಐಗುಪ್ತದೊಳಗಿಂದ ಹೊರಟ ಮೇಲೆ ಹೊಡೆದರು.
Kannada Bible (KNCL) BSI 2016
ಜೋರ್ಡನ್ ನದಿಯ ಆಚೆ ಬೇತ್ ಪೆಗೋರಿಗೆ ಎದುರಾಗಿರುವ ಕಣಿವೆಯ ಹೆಷ್ಬೋನಿನಲ್ಲಿ ವಾಸಿಸಿದ ಅಮೋರಿಯರ ಅರಸ ಸೀಹೋನನ ದೇಶದಲ್ಲಿ ಇದು ನಡೆಯಿತು. ಮೋಶೆಯೂ ಇಸ್ರಯೇಲರೂ ಈಜಿಪ್ಟಿನಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೊರ್ದನ್ ನದಿಯ ಆಚೆಯಲ್ಲಿ ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಅವನನ್ನು ಮೋಶೆಯೂ, ಇಸ್ರಾಯೇಲರೂ ಈಜಿಪ್ಟಿನೊಳಗಿಂದ ಹೊರಟ ಮೇಲೆ ಸೋಲಿಸಿದರು.