Deuteronomy 5:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೂ ಈ ಘೋರವಾದ ಅಗ್ನಿಜ್ವಾಲೆಯು ನಮ್ಮನ್ನು ದಹಿಸಿ ಬಿಟ್ಟಿತು, ಮತ್ತು ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ಪುನಃ ಕೇಳಿದರೆ ಸತ್ತೇವು.
Kannada BSI Bible 2016
ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೂ ಈ ಘೋರವಾದ ಅಗ್ನಿಜ್ವಾಲೆಯು ನಮ್ಮನ್ನು ದಹಿಸಿಬಿಟ್ಟೀತು, ಮತ್ತು ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರಿಗಿ ಕೇಳಿದರೆ ಸತ್ತೇವು.
Kannada Bible (KNCL) BSI 2016
ಹಾಗಿದ್ದರೂ ಈಗ ನಾವೇಕೆ ಪ್ರಾಣಾಪಾಯಕ್ಕೆ ಗುರಿಯಾಗಬೇಕು? ಬಹುಶಃ ಈ ಘೋರ ಬೆಂಕಿ ನಮ್ಮನ್ನು ದಹಿಸಿಬಿಡಬಹುದು; ನಮ್ಮ ದೇವರಾದ ಸರ್ವೇಶ್ವರನ ಸ್ವರವನ್ನು ನಾವು ಮತ್ತೆ ಕೇಳಿದರೆ ಸಾಯಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗಾದರೆ ಈಗ ನಾವು ಏಕೆ ಸಾಯಬೇಕು? ಈ ದೊಡ್ಡ ಬೆಂಕಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವುದು. ನಾವು ಇನ್ನೂ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿದರೆ ಸಾಯುತ್ತೇವೆ.