Deuteronomy 6:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ, ಆತನು ಈಗಲೂ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು.
Kannada BSI Bible 2016
ನಮಗೆ ಎಂದೆಂದಿಗೂ ಒಳ್ಳೇದಾಗುವ ಹಾಗೆಯೂ ಈ ದಿನದಂತೆ ನಾವು ಬದುಕುವ ಹಾಗೆಯೂ ನಾವು ಈ ನಿಯಮಗಳನ್ನೆಲ್ಲಾ ಕೈಕೊಂಡು ನಮ್ಮ ದೇವರಾದ ಕರ್ತನಿಗೆ ಭಯಪಡಬೇಕೆಂದು ಕರ್ತನು ನಮಗೆ ಆಜ್ಞಾಪಿಸಿದ್ದಾನೆ.ಆತನು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಕರ್ತನ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಕೊಂಡು ನಡೆದರೆ ಅದು ನಮಗೆ ನೀತಿಯಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ ಆತನು ಇಂದಿನಂತೆ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯ ಭಕ್ತಿಯುಳ್ಳವರಾಗಿರಬೇಕು.
Kannada Bible (KNCL) BSI 2016
ಈ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ನಮಗೆ ಅಪ್ಪಣೆಮಾಡಿದ್ದಾರೆ. ಸದಾ ಶುಭವುಂಟಾಗಬೇಕಾದರೆ, ಅವರು ಎಂದಿನಂತೆ ನಮ್ಮ ಪ್ರಾಣಗಳನ್ನು ಕಾಪಾಡಬೇಕಾದರೆ ನಾವು ನಮ್ಮ ದೇವರಾದ ಸರ್ವೇಶ್ವರನಿಗೆ ಭಯಭಕ್ತಿಯುಳ್ಳವರಾಗಿರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಮಗೆ ಎಂದೆಂದಿಗೂ ಒಳ್ಳೆಯದಾಗುವಂತೆಯೂ, ಇಂದಿನಂತೆ ನಾವು ಬದುಕುವಂತೆಯೂ, ನಾವು ಈ ನಿಯಮಗಳನ್ನೆಲ್ಲಾ ಕೈಗೊಂಡು ನಮ್ಮ ಯೆಹೋವ ದೇವರಿಗೆ ಭಯಪಡಬೇಕೆಂದು ಅವರು ನಮಗೆ ಆಜ್ಞಾಪಿಸಿದ್ದಾರೆ.