Deuteronomy 6:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿಸಲು ಯೋಗ್ಯರಾಗುವೆವು” ಎಂಬುದಾಗಿ ನೀವು ಉತ್ತರಕೊಡಬೇಕು.
Kannada BSI Bible 2016
ಆತನು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಕರ್ತನ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಕೊಂಡು ನಡೆದರೆ ಅದು ನಮಗೆ ನೀತಿಯಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಎಣಿಸಲ್ಪಡುವೆವೆಂಬದಾಗಿ ನೀವು ಉತ್ತರಕೊಡಬೇಕು.
Kannada Bible (KNCL) BSI 2016
ನಮ್ಮ ದೇವರಾದ ಸರ್ವೇಶ್ವರ ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಅವರ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿತರಾಗುವೆವು,’ ಎಂದು ನೀವು ಉತ್ತರಕೊಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಗೊಂಡು ನಡೆದರೆ, ಅದು ನಮಗೆ ನೀತಿಯಾಗಿರುವುದು,” ಎಂದು ಹೇಳಬೇಕು.