Deuteronomy 7:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸಮೃದ್ಧಿಯಾದ ಬೆಳೆಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವಾದಗಳೆಲ್ಲಾ ಪ್ರಾಪ್ತವಾಗುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ನಿಮ್ಮನ್ನು ಪ್ರೀತಿಸಿ, ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ, ವ್ಯವಸಾಯವನ್ನೂ, ನಿಮಗಿರುವ ದವಸ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ನಿಮ್ಮ ದನ ಮತ್ತು ಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು.
Kannada BSI Bible 2016
ಆತನು ನಿನ್ನನ್ನು ಪ್ರೀತಿಮಾಡಿ ಆಶೀರ್ವದಿಸಿ ಹೆಚ್ಚಿಸುವನು; ನಿನಗೆ ಕೊಡುತ್ತೇನೆಂದು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನ ಗರ್ಭದ ಫಲ ವನ್ನೂ ಭೂಮಿಯ ಹುಟ್ಟುವಳಿಯನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಪಶುಗಳನ್ನೂ ನಿನ್ನ ಕುರಿಮಂದೆಗಳನ್ನೂ ಆಶೀರ್ವದಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮನ್ನು ಪ್ರೀತಿಸಿ ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ ವ್ಯವಸಾಯವನ್ನೂ ನಿಮಗಿರುವ ಧಾನ್ಯದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ನಿಮ್ಮ ದನಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು.
Kannada Bible (KNCL) BSI 2016
ನಿಮ್ಮನ್ನು ಅಚಲವಾಗಿ ಪ್ರೀತಿಸಿ, ಅಭಿವೃದ್ಧಿಗೊಳಿಸುವರು; ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿನಲ್ಲಿ ನಿಮ್ಮ ಸಂತಾನವನ್ನು, ವ್ಯವಸಾಯವನ್ನು, ದವಸಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಹಾಗು ದನಕುರಿಗಳ ಮಂದೆಯನ್ನು ವೃದ್ಧಿಗೊಳಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನಿಮ್ಮನ್ನು ಪ್ರೀತಿಸಿ, ನಿಮ್ಮನ್ನು ಆಶೀರ್ವದಿಸಿ, ನಿಮ್ಮನ್ನು ಅಭಿವೃದ್ಧಿಗೊಳಿಸಿ ಮತ್ತು ನಿಮಗೆ ಕೊಡುತ್ತೇನೆಂದು ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ದೇಶದಲ್ಲಿ ನಿಮ್ಮ ಗರ್ಭದ ಫಲವನ್ನೂ ಅಂದರೆ, ಭೂಮಿಯ ಹುಟ್ಟುವಳಿಯನ್ನೂ, ನಿಮ್ಮ ಧಾನ್ಯವನ್ನೂ, ನಿಮ್ಮ ಹೊಸ ದ್ರಾಕ್ಷಾರಸವನ್ನೂ, ನಿಮ್ಮ ಎಣ್ಣೆಯನ್ನೂ, ನಿಮ್ಮ ಪಶುಗಳನ್ನೂ, ನಿಮ್ಮ ಕುರಿಗಳ ಮಂದೆಗಳನ್ನೂ ಆಶೀರ್ವದಿಸುವರು.