Deuteronomy 7:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯೆಹೋವನು ತೆಗೆದುಹಾಕುವನು. ಈಜಿಪ್ಟಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೈರಿಗಳಿಗೆ ಉಂಟಾಗುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ, ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.
Kannada BSI Bible 2016
ಕರ್ತನು ಎಲ್ಲಾ ರೋಗಗಳನ್ನು ನಿನ್ನಿಂದ ತೆಗೆದು ಬಿಡುವನು; ನಿನಗೆ ತಿಳಿದಿರುವ ಐಗುಪ್ತದ ಕೆಟ್ಟ ರೋಗಗಳನ್ನೆಲ್ಲಾ ನಿನ್ನ ಮೇಲೆ ಬರಮಾಡದೆ ನಿನ್ನನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರ ಮಾಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.
Kannada Bible (KNCL) BSI 2016
ನಿಮಗೆ ಯಾವ ವ್ಯಾಧಿಯೂ ತಗಲದಂತೆ ಸರ್ವೇಶ್ವರ ನೋಡಿಕೊಳ್ಳುವರು. ನೀವೇ ಅನುಭವದಿಂದ ಅರಿತಿರುವಂತೆ ಈಜಿಪ್ಟ್ ದೇಶದಲ್ಲಿ ಪ್ರಬಲ ಆಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸಲಿಲ್ಲ; ಅವುಗಳನ್ನು ನಿಮ್ಮ ದ್ವೇಷಿಗಳ ಮೇಲೆ ಮಾತ್ರ ಬರಮಾಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಎಲ್ಲಾ ರೋಗಗಳನ್ನು ನಿಮ್ಮಿಂದ ತೆಗೆದುಬಿಡುವರು. ನಿಮಗೆ ತಿಳಿದಿರುವ ಈಜಿಪ್ಟಿನ ಕ್ರೂರರೋಗಗಳನ್ನು ನಿಮ್ಮ ಮೇಲೆ ಬರಮಾಡದ, ನಿಮ್ಮನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರಮಾಡುವರು.