Deuteronomy 7:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ದೇಶದಲ್ಲಿ ನೀವು ಯೆಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲಾ ಕೊಂದುಬಿಡಬೇಕು. ಅವರಿಗೆ ಕನಿಕರ ತೋರಬಾರದು. ಅವರ ದೇವರುಗಳನ್ನು ಪೂಜಿಸಕೂಡದು! ಯಾಕೆಂದರೆ ಅವು ನಿಮಗೆ ಉರುಲಾಗಿ ನಿಮ್ಮ ಜೀವಿತವನ್ನು ಹಾಳುಮಾಡುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯ ಹೊಂದುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮ್ಮ ಜೀವಕ್ಕೆ ಉರುಲಾಗುವವು.
Kannada BSI Bible 2016
ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ; ಅವರ ಮೇಲೆ ನೀನು ಕಟಾಕ್ಷವಿಡಬಾರದು; ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು; ಅದು ನಿನಗೆ ಉರುಲಾ ಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯಪಡಿಸುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮಗೆ ಉರುಲಾಗುವವು.
Kannada Bible (KNCL) BSI 2016
ನಿಮ್ಮ ದೇವರಾದ ಸರ್ವೇಶ್ವರಾ, ನಿಮ್ಮಿಂದ ಪರಾಜಯಪಡಿಸುವ ಜನರುಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮಗೆ ಉರುಲಾಗುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಒಪ್ಪಿಸುವ ಜನರನ್ನೆಲ್ಲಾ ನೀವು ಸಂಹರಿಸಬೇಕು. ಅವರ ಮೇಲೆ ನೀವು ಕಟಾಕ್ಷವಿಡಬಾರದು. ಅವರ ದೇವರುಗಳನ್ನು ಆರಾಧಿಸಬಾರದು. ಏಕೆಂದರೆ ಅವು ನಿಮಗೆ ಉರುಲಾಗುವವು.

Recommended Reading