Deuteronomy 7:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಜನರನ್ನು ಶಿಕ್ಷಿಸಲು ದೇವರು ಕಡಜದ ಹುಳಗಳನ್ನು ಅವರ ಮಧ್ಯಕ್ಕೆ ಕಳುಹಿಸುವನು ಮತ್ತು ಅವರನ್ನೆಲ್ಲಾ ನಾಶಮಾಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು ಕಣಜದ ಹುಳಗಳನ್ನು ಅವರ ನಡುವೆ ಕಳುಹಿಸುವನು. ಮರೆಯಾಗಿದ್ದು ಉಳಿದವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು.
Kannada BSI Bible 2016
ಇದಲ್ಲದೆ ಉಳಿದವರೂ ನಿನಗೆ ಮರೆಯಾಗಿ ಉಳುಕೊಂಡವರೂ ನಾಶವಾಗುವ ತನಕ ನಿನ್ನ ದೇವ ರಾದ ಕರ್ತನು ಕಡಜದ ಹುಳವನ್ನು ಅವರಲ್ಲಿ ಕಳುಹಿ ಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು ಕಡಜದ ಹುಳಗಳನ್ನು ಅವರೊಳಗೆ ಕಳುಹಿಸುವನು; ಮರೆಯಾಗಿದ್ದು ಉಳುಕೊಂಡವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು.
Kannada Bible (KNCL) BSI 2016
ಅದು ಮಾತ್ರವಲ್ಲದೆ, ನಿಮ್ಮ ದೇವರಾದ ಸರ್ವೇಶ್ವರ ಕಣಜದ ಹುಳುಗಳನ್ನು ಅವರ ನಡುವೆ ಕಳುಹಿಸುವರು; ಮರೆ ಆಗಿ ಉಳಿದುಕೊಂಡವರು ಆ ಹುಳಗಳಿಂದ ನಾಶವಾಗಿ ನಿಮಗೆ ಕಾಣದೆಹೋಗುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಉಳಿದವರೂ, ನಿಮಗೆ ಮರೆಯಾಗಿ ಉಳುಕೊಂಡವರೂ ನಾಶವಾಗುವ ತನಕ ನಿಮ್ಮ ದೇವರಾದ ಯೆಹೋವ ದೇವರು ಕಣಜದ ಹುಳವನ್ನು ಅವರಲ್ಲಿ ಕಳುಹಿಸುವರು.