Deuteronomy 8:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿ ನೀವು ದುರ್ಭಿಕ್ಷವನ್ನು ಕಾಣದೆ ಸಮೃದ್ಧಿಯಾಗಿ ಊಟಮಾಡಿ, ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ದೇಶದಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ; ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳುಂಟು.
Kannada BSI Bible 2016
ನೀನು ಕೊರತೆಯಿಲ್ಲದೆ ರೊಟ್ಟಿ ತಿನ್ನುವ ಆ ದೇಶದಲ್ಲಿ ಯಾವದರ ಕೊರತೆ ನಿನಗೆ ಆಗದು; ಅದರ ಕಲ್ಲುಗಳು ಕಬ್ಬಿಣವಾಗಿಯೂ ಅದರ ಬೆಟ್ಟ ಗಳೊಳಗಿಂದ ತಾಮ್ರವನ್ನು ಅಗಿಯಬಹುದಾದದ್ದೂ ಆಗಿರುವ ದೇಶ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ನೀವು ದುರ್ಭಿಕ್ಷವನ್ನೇ ಕಾಣದೆ ಸಮೃದ್ಧಿಯಾಗಿ ಉಂಡು ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ದೇಶದಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ; ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳುಂಟು.
Kannada Bible (KNCL) BSI 2016
ಅಲ್ಲಿ ನೀವು ದುರ್ಭಿಕ್ಷವನ್ನೇ ಕಾಣದೆ, ಸಮೃದ್ಧಿ ಆಗಿ ಉಂಡು, ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ನಾಡಿನಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ. ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದೇಶದಲ್ಲಿ ನಿಮಗೆ ಆಹಾರಕ್ಕೆ ಕೊರತೆ ಇರುವುದಿಲ್ಲ. ಅಲ್ಲಿ ಯಾವುದರ ಕೊರತೆ ನಿಮಗೆ ಆಗದು. ಅದರ ಕಲ್ಲುಗಳಲ್ಲಿ ಕಬ್ಬಿಣವನ್ನೂ, ಅದರ ಬೆಟ್ಟಗಳಲ್ಲಿ ತಾಮ್ರದ ಗಣಿಗಳನ್ನೂ ಅಗೆಯಬಹುದು.