Deuteronomy 9:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಮೇಲೆ ನಾನು ನಲವತ್ತು ದಿನ ಹಗಲಿರುಳು ಯೆಹೋವನ ಮುಂದೆ ಬೋರಲ ಬಿದ್ದಿದ್ದೆನು. ನಾನು ಊಟ ಮಾಡಲಿಲ್ಲ, ನೀರನ್ನು ಕುಡಿಯಲಿಲ್ಲ ಯಾಕೆಂದರೆ ನೀವು ಪಾಪಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಆತನು ಕೋಪಗೊಂಡಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನ ಪಾನಗಳನ್ನು ಬಿಟ್ಟು ನಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು.
Kannada BSI Bible 2016
ಆ ಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನುಮಾಡಿ ಆತನಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿ ತಿನ್ನದೆ, ನೀರು ಕುಡಿಯದೆ, ಕರ್ತನ ಮುಂದೆ ನಾನು ಬಿದ್ದಿದ್ದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನಪಾನಗಳನ್ನು ಬಿಟ್ಟು ನಾಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು.
Kannada Bible (KNCL) BSI 2016
“ನೀವು ಹೀಗೆ ಅಪರಾಧಮಾಡಿ, ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡೆಸಿ, ಅವರನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನಪಾನಗಳನ್ನು ಬಿಟ್ಟು ನಲವತ್ತು ದಿನಗಳು ಹಗಲಿರುಳು ಸರ್ವೇಶ್ವರನ ಸನ್ನಿಧಿಯಲ್ಲೇ ಬಿದ್ದಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಲವತ್ತು ದಿವಸ ಹಗಲುರಾತ್ರಿ ಊಟಮಾಡದೆ, ನೀರು ಕುಡಿಯದೆ, ಯೆಹೋವ ದೇವರ ಮುಂದೆ ಬಿದ್ದಿದ್ದೆನು.