Deuteronomy 9:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಇವರಿಗೆ ಶಿಕ್ಷೆಕೊಟ್ಟರೆ ಈಜಿಪ್ಟಿನವರು, ‘ದೇವರು ತನ್ನ ಜನರನ್ನು ತಾನು ವಾಗ್ದಾನ ಮಾಡಿದ ದೇಶಕ್ಕೆ ನಡೆಸಲು ಅಸಮರ್ಥನಾದನು. ಆತನು ಅವರನ್ನು ದ್ವೇಷಿಸುತ್ತಾನೆ; ಆದ್ದರಿಂದ ಅವರನ್ನು ಮರುಭೂಮಿಯಲ್ಲಿ ಹತಮಾಡಲು ಕೊಂಡೊಯ್ದಿದ್ದಾನೆ’ ಎಂದು ಹೇಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಯಾವ ದೇಶದಿಂದ ನಮ್ಮನ್ನು ಬರಮಾಡಿದಿಯೋ ಆ ದೇಶದವರು, ‘ಯೆಹೋವನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಸೇರಿಸಲಾರದೆ ಹಗೆಮಾಡಿ ಅರಣ್ಯದಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದನು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
Kannada BSI Bible 2016
ನಮ್ಮನ್ನು ಎಲ್ಲಿಂದ ಹೊರಗೆ ಬರಮಾಡಿದಿಯೋ ಆ ದೇಶವು--ಕರ್ತನು ಅವರಿಗೆ ಹೇಳಿದ ದೇಶದಲ್ಲಿ ಅವರನ್ನು ಬರಮಾಡ ಲಾರದೆ ಇದ್ದದ್ದರಿಂದಲೂ ಅವರನ್ನು ಹಗೆಮಾಡಿದ್ದ ರಿಂದಲೂ ಅರಣ್ಯದಲ್ಲಿ ಅವರನ್ನು ಕೊಂದುಹಾಕುವ ಹಾಗೆ ಅವರನ್ನು ಹೊರಗೆ ಬರಮಾಡಿದನೆಂದು ಹೇಳಬಾರದು.ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಯಾವ ದೇಶದಿಂದ ನಮ್ಮನ್ನು ಬರಮಾಡಿದಿಯೋ ಆ ದೇಶದವರು - ಯೆಹೋವನು ಇಸ್ರಾಯೇಲ್ಯರಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಸೇರಿಸಲಾರದೆ ಹಗೆಮಾಡಿ ಅರಣ್ಯದಲ್ಲಿ ಕೊಲ್ಲುವದಕ್ಕೆ ಕರಕೊಂಡು ಹೋದನೆಂದು ಹೇಳುವದಕ್ಕೆ ಆಸ್ಪದವಾದೀತು.
Kannada Bible (KNCL) BSI 2016
ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ ಆ ದೇಶದವರು, ‘ಸರ್ವೇಶ್ವರ ಇಸ್ರಯೇಲರಿಗೆ ವಾಗ್ದಾನಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೇ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ, ಆ ದೇಶದವರು, ‘ಯೆಹೋವ ದೇವರು ಇಸ್ರಾಯೇಲರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.