Ecclesiastes 1:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? ನಮಗಿಂತ ಮೊದಲು ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
Kannada BSI Bible 2016
ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಹೊಸದು ಎನಿಸಿಕೊಳ್ಳುವ ವಸ್ತುವಿದ್ದರೂ ಅದು ಪೂರ್ವದಲ್ಲಿ ನಮಗಿಂತ ಮುಂಚಿನ ಯುಗಗಳಲ್ಲಿಯೂ ಇದ್ದದ್ದೇ.
Kannada Bible (KNCL) BSI 2016
ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೋಡು, ಇದು ಹೊಸದು,” ಎಂದು ಯಾವ ವಿಷಯವಾಗಿ ಹೇಳಬಹುದೋ? ಅದು ನಮಗಿಂತ ಮುಂಚೆ ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.