Ecclesiastes 1:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೂರ್ಯನು ಉದಯಿಸುತ್ತಾನೆ. ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ.
Kannada BSI Bible 2016
ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೂರ್ಯನು ಏರುವನು, ಸೂರ್ಯನು ಇಳಿಯುವನು, ಹೊರಟ ಸ್ಥಾನಕ್ಕೆ ಅಸುರುಸುರಾಗಿ ತಿರಿಗಿ ಓಡುವನು.
Kannada Bible (KNCL) BSI 2016
ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೂರ್ಯನು ಉದಯಿಸುತ್ತಾನೆ, ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಳಕ್ಕೆ ಆತುರದಿಂದ ಹಿಂದಿರುಗುತ್ತಾನೆ.