Ecclesiastes 10:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ಯಜಮಾನನು ನಿನ್ನ ಮೇಲೆ ಕೋಪಗೊಂಡ ಮಾತ್ರಕ್ಕೆ ನಿನ್ನ ಉದ್ಯೋಗವನ್ನು ಬಿಡಬೇಡ. ನೀನು ತಾಳ್ಮೆಯಿಂದ ಸಹಾಯಕನಾಗಿದ್ದರೆ ದೊಡ್ಡ ತಪ್ಪುಗಳನ್ನು ಸಹ ನೀನು ಸರಿಪಡಿಸಲು ಸಾಧ್ಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ. ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.
Kannada BSI Bible 2016
ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ; ತಾಳ್ಮೆಯು ದೊಡ್ಡ ದೋಷಗಳನ್ನು ಅಡಗಿಸುತ್ತದಲ್ಲವೆ.
Kannada Bible (KNCL) BSI 2016
ರಾಜನು ಸಿಟ್ಟುಗೊಂಡನೆಂದು ಉದ್ಯೋಗಕ್ಕೇ ರಾಜೀನಾಮೆ ಕೊಟ್ಟುಬಿಡಬೇಡ; ತಾಳ್ಮೆಯಿಂದ ಘನದೋಷಗಳನ್ನೂ ಅಳಿಸಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ, ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ. ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ.