Ecclesiastes 2:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಮನಸ್ಸಿನಲ್ಲಿ, “ಈಗ ಬಾ, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು. ಸುಖವನ್ನು ಅನುಭವಿಸು” ಅಂದುಕೊಂಡೆನು. ಆಹಾ! ಇದು ವ್ಯರ್ಥವೇ.
Kannada BSI Bible 2016
ನಾನು ನನ್ನ ಹೃದಯದಲ್ಲಿ--ಹೋಗು, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಆದಕಾರಣ ಸುಖವನ್ನು ಅನುಭವಿಸು ಎಂದು ಅಂದುಕೊಂಡೆನು. ಇಗೋ, ಇದು ಕೂಡ ವ್ಯರ್ಥವೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಮನಸ್ಸಿನಲ್ಲಿ, - ಬಾ, ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಸುಖದ ರುಚಿ ನೋಡು ಅಂದುಕೊಂಡೆನು. ಆಹಾ, ಇದೂ ವ್ಯರ್ಥವೇ.
Kannada Bible (KNCL) BSI 2016
“ಬಾ ಮನವೇ, ಸಂತೋಷದ ಮೂಲಕ ನಿನ್ನನ್ನು ಪರೀಕ್ಷಿಸುವೆ; ಸುಖಭೋಗವನ್ನು ಅನುಭವಿಸು” ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಆದರೆ ಇದೂ ವ್ಯರ್ಥವೇ ಸರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಈಗ ಬಾ, ಯಾವುದು ಒಳ್ಳೆಯದು ಎಂಬುದನ್ನು ಸುಖಭೋಗಗಳಿಂದ ನಿನ್ನನ್ನು ಪರೀಕ್ಷಿಸುವೆನು,” ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಂಡೆ. ಆದರೆ ಅದೂ ಕೂಡ ವ್ಯರ್ಥವಾದದ್ದೆಂದು ರುಜುವಾತಾಯಿತು.