Ecclesiastes 2:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕಾಶದ ಕೆಳಗೆ ಮನುಷ್ಯರ ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಒಳ್ಳೆಯದೆಂದು ನಾನು ತಿಳಿದುಕೊಳ್ಳುವುದಕ್ಕಾಗಿ, ನನ್ನ ಮನಸ್ಸು ಜ್ಞಾನದಿಂದಿರುವಾಗಲೇ ದೇಹವನ್ನು ದ್ರಾಕ್ಷಾರಸದಿಂದ ಸಂತೋಷದಲ್ಲಿ ಇಡುವುದಕ್ಕೂ, ಬುದ್ಧಿಹೀನತೆಯನ್ನು ಅವಲಂಬಿಸುವುದಕ್ಕೂ ಮನಸ್ಸಿನಲ್ಲಿ ವಿಚಾರಮಾಡಿಕೊಂಡೆನು.
Kannada BSI Bible 2016
ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕಾಶದ ಕೆಳಗೆ ನರಜನ್ಮದವರು ಅಲ್ಪಾಯುಷ್ಯದಲ್ಲಿ ಏನು ಮಾಡುವದು ಯುಕ್ತವೆಂದು ನಾನು ತಿಳಿದುಕೊಳ್ಳುವದಕ್ಕೋಸ್ಕರ ನನ್ನ ಮನಸ್ಸು ಜ್ಞಾನದಿಂದಿರುವಾಗಲೇ ದೇಹವನ್ನು ದ್ರಾಕ್ಷಾರಸದಿಂದ ಉತ್ತೇಜನಮಾಡುವದಕ್ಕೂ ಬುದ್ಧಿಹೀನತೆಯನ್ನು ಅವಲಂಬಿಸುವದಕ್ಕೂ ಮನಸ್ಸಿನಲ್ಲಿ ವಿಚಾರಮಾಡಿಕೊಂಡೆನು.
Kannada Bible (KNCL) BSI 2016
ದೇಹಕ್ಕೆ ಮಧುಪಾನ ಮಾಡಿಸೋಣ; ಮೂರ್ಖತನದಲ್ಲಿ ತಲ್ಲೀನನಾಗೋಣ; ಜೀವಮಾನದ ಅಲ್ಪಕಾಲದಲ್ಲಿ ನರಮಾನವನಿಗೆ ಧರೆಯಲ್ಲಿ ಯಾವುದು ಹಿತ ಎಂದು ತಿಳಿದುಕೊಳ್ಳೋಣ” ಎಂದು ಜ್ಞಾನಾಶಕ್ತನಾದ ನಾನು ಮನಸ್ಸಿನಲ್ಲೇ ಅಂದುಕೊಂಡೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಕಾಶದ ಕೆಳಗೆ ಮನುಷ್ಯರು ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಹಿತ ಎಂದು ನಾನು ತಿಳಿದುಕೊಳ್ಳಲು ಬಯಸಿದೆ. ನನ್ನ ಮನಸ್ಸು ಇನ್ನೂ ಜ್ಞಾನದಿಂದಿರುವಾಗಲೇ ದ್ರಾಕ್ಷಾರಸದಿಂದ ಸಂತೋಷ ಪಡೋಣ, ಮೂರ್ಖತನವನ್ನು ಅಪ್ಪಿಕೊಳ್ಳೋಣ ಎಂದುಕೊಂಡೆ.