Ecclesiastes 3:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರ ಕಾರ್ಯವೆಲ್ಲವು ನಿತ್ಯವೆಂದು ಬಲ್ಲೆನು. ಅದಕ್ಕೆ ಯಾವುದನ್ನೂ ಸೇರಿಸಲಾರೆವು. ಅದರಿಂದ ಯಾವುದನ್ನೂ ತೆಗೆಯಲಾರೆವು. ದೇವರ ಈ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕೆಂಬುದೇ ಕಾರಣ.
Kannada BSI Bible 2016
ದೇವರು ಮಾಡುವದೆಲ್ಲವು ಶಾಶ್ವತವಾಗಿರುವದೆಂದು ನಾನು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಬಾರದು, ಇಲ್ಲವೆ ಅದರಿಂದ ಯಾವದನ್ನೂ ತೆಗೆಯಬಾರದು; ಮನುಷ್ಯರು ಆತನ ಎದುರಿನಲ್ಲಿ ಭಯಪಡುವಂತೆ ದೇವರು ಅದನ್ನು ಮಾಡುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರ ಕಾರ್ಯವೆಲ್ಲವೂ ನಿತ್ಯವೆಂದು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಲಾರೆವು, ಅದರಿಂದ ಯಾವದನ್ನೂ ತೆಗೆಯಲಾರೆವು; ದೇವರ ಈ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬದೇ ಕಾರಣವು.
Kannada Bible (KNCL) BSI 2016
ದೇವರ ಕಾರ್ಯವೆಲ್ಲವು ಶಾಶ್ವತವಾದುದು ಎಂದು ಬಲ್ಲೆ. ಅದಕ್ಕೆ ಯಾವುದನ್ನೂ ಸೇರಿಸಲಾಗದು. ಅದರಿಂದ ಯಾವುದನ್ನೂ ಕಳೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮಾನವರು ಭಯಭಕ್ತಿಯಿಂದ ಇರಬೇಕೆಂಬ ಕಾರಣದಿಂದಲೇ ದೇವರು ಹೀಗೆ ಮಾಡಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಮಾಡುವ ಕಾರ್ಯವೆಲ್ಲವೂ ಶಾಶ್ವತವಾಗಿರುವುದೆಂದು ನಾನು ಬಲ್ಲೆನು; ಅದಕ್ಕೆ ಯಾವುದನ್ನೂ ಕೂಡಿಸಲಾಗದು ಮತ್ತು ಯಾವುದನ್ನೂ ತೆಗೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮನುಷ್ಯರು ಭಯಭಕ್ತಿಯಿಂದ ಜೀವಿಸಬೇಕೆಂದು ದೇವರು ಇದನ್ನು ಮಾಡಿದ್ದಾರೆ.