Ecclesiastes 4:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಬಡಯುವಕನು ದೇಶದ ಒಂದು ಬಡಕುಟುಂಬದಲ್ಲಿ ಹುಟ್ಟಿದ್ದಿರಬಹುದು ಅಥವಾ ದೇಶವನ್ನು ಆಳುವುದಕ್ಕಾಗಿ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟಿರಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.
Kannada BSI Bible 2016
ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ತರಲ್ಪಟ್ಟನು; ಹೌದು, ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿದ್ದನು.
Kannada Bible (KNCL) BSI 2016
ಇಂಥ ಯುವಕನೊಬ್ಬನನ್ನು ರಾಜನನ್ನಾಗಿಸಲು ಸೆರೆಮನೆಯಿಂದ ಕರೆ ತರಲಾಯಿತು. ರಾಜ್ಯದಲ್ಲಿ ಒಬ್ಬ ಬಡ ಪ್ರಜೆಯಾಗಿ ಹುಟ್ಟಿದವನು ಆತ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಯುವಕನು ಸೆರೆಮನೆಯಿಂದ ರಾಜ್ಯವನ್ನಾಳುವುದಕ್ಕಾಗಿ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.