Ecclesiastes 4:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲವರು ಹೇಳುವಂತೆ, “ಏನೂ ಮಾಡದೆ ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಮೂಢತನ. ದುಡಿಯದವನು ಹಸಿವೆಯಿಂದ ಸಾಯುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೂಢನು ತನ್ನ ಕೈಗಳನ್ನು ಮುಚ್ಚಿಕೊಂಡು ಯಾವ ಕೆಲಸವನ್ನು ಮಾಡದೆ, ತನ್ನನ್ನು ತಾನು ನಾಶಪಡಿಸಿಕೊಳ್ಳುವನು.
Kannada BSI Bible 2016
ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂಢನು ಅಪ್ಪುಗೈ ಮಾಡಿಕೊಂಡು ತನ್ನ ಮಾಂಸವನ್ನು ತಾನೇ ತಿನ್ನುವನು.
Kannada Bible (KNCL) BSI 2016
ಕೈಕಟ್ಟಿಕೊಂಡು ಕುಳಿತುಕೊಳ್ಳುವ ಮೈಗಳ್ಳನಾದ ಮೂಢನಿಗೆ ಅವನ ಒಡಲೇ ಊಟ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸುಮ್ಮನೇ ಕೈಕಟ್ಟಿ ಕುಳಿತುಕೊಂಡು ಬುದ್ಧಿಹೀನರು, ತಮ್ಮನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ.