Ecclesiastes 5:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ. “ಇದು ಅಜಾಗ್ರತೆಯಿಂದ ಆಯಿತು” ಎಂದು ದೂತನ ಮುಂದೆ ಹೇಳಬೇಡ. ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಕೆಲಸವನ್ನು ಏಕೆ ಹಾಳುಮಾಡಬೇಕು?
Kannada BSI Bible 2016
ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ; ಇದು ಅಜಾಗ್ರತೆಯಿಂದಾಯಿತೆಂದು ದೂತನ ಮುಂದೆ ಹೇಳಬೇಡ; ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಗೆಲಸವನ್ನು ಏಕೆ ಹಾಳುಮಾಡಬೇಕು?
Kannada Bible (KNCL) BSI 2016
ನಿನ್ನ ಬಾಯಿ ಪಾಪಕ್ಕೆ ಕಾರಣ ಆಗದಂತೆ ನೋಡಿಕೊ. ಅದು ಅಜಾಗ್ರತೆಯಿಂದ ಆಯಿತೆಂದು ದೇವದೂತನ ಮುಂದೆ ನೆಪ ಹೇಳಬೇಡ. ದೇವರು ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೆಲಸವನ್ನು ಹಾಳುಮಾಡಿಯಾರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ನಡೆಸದಂತೆ ನೋಡಿಕೋ. “ನಾನು ಹರಕೆ ಮಾಡಿದ್ದು ತಪ್ಪು,” ಎಂದು ದೂತನ ಮುಂದೆ ಹೇಳಬೇಡ. ಇದರಿಂದ ದೇವರು ನಿನ್ನ ಮಾತಿಗೆ ಮೆಚ್ಚದೆ, ನಿನ್ನನ್ನು ಏಕೆ ದಂಡಿಸಬೇಕು?