Ecclesiastes 7:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೊ ಯಾರಿಗೂ ಗೊತ್ತಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸುಖದ ದಿನದಲ್ಲಿ ಸುಖದಿಂದಿರು, ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವುದನ್ನೂ ಗ್ರಹಿಸಲಾರದಂತೆ, ದೇವರು ಇವುಗಳನ್ನು ಒಂದರ ಮೇಲೊಂದು ಬರಮಾಡಿದ್ದಾನೆ.
Kannada BSI Bible 2016
ಅಭಿವೃದ್ಧಿಯ ದಿನದಲ್ಲಿ ಸಂತೋಷವಾಗಿರು; ಆದರೆ ವಿಪತ್ಕಾಲದ ದಿವಸದಲ್ಲಿ ಯೋಚಿಸು; ತನ್ನ ಅಂತ್ಯ ಬಂದಾಗ ಮನುಷ್ಯನು ಯಾವದನ್ನು ನೋಡದಂತೆ ದೇವರು ಸಹ ಒಂದರ ಮೇಲೊಂದನ್ನು ಇಟ್ಟಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸುಖದ ದಿನದಲ್ಲಿ ಸುಖದಿಂದಿರು; ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವದನ್ನೂ ಗ್ರಹಿಸಲಾರದಂತೆ ದೇವರು ಇವುಗಳನ್ನು ದ್ವಂದ್ವ ಮಾಡಿದ್ದಾನೆ.
Kannada Bible (KNCL) BSI 2016
ಸುಖದಿನದಲ್ಲಿ ಸಂತೋಷದಿಂದಿರು, ದುಃಖದಿನದಲ್ಲಿ ಆಲೋಚಿಸಿನೋಡು; ಮನುಷ್ಯನು ತನ್ನ ಆಯುಸ್ಸು ಕಳೆದ ಮೇಲೆ ಸಂಭವಿಸುವುದೇನೆಂದು ಗ್ರಹಿಸಲಾಗದಂತೆ ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸುಖ ದಿನದಲ್ಲಿ ಸಂತೋಷವಾಗಿರು. ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು: ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.