Ecclesiastes 7:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ. (Verses 19-20)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನಿಗೆ ಜ್ಞಾನದಿಂದ ಉಂಟಾಗುವ ಬಲವು ಹೆಚ್ಚು.
Kannada BSI Bible 2016
ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನದಿಂದ ಜ್ಞಾನಿಗೆ ಉಂಟಾಗುವ ಬಲವು ಹೆಚ್ಚು.
Kannada Bible (KNCL) BSI 2016
ಹತ್ತು ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ದೃಢತೆಗಿಂತ ಜ್ಞಾನಿಗೆ ಜ್ಞಾನದಿಂದ ದೊರಕುವ ದೃಢತೆ ಹೆಚ್ಚು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಟ್ಟಣದ ಹತ್ತು ಮಂದಿ ಅಧಿಕಾರಿಗಳ ಸ್ಥಿರತೆಗಿಂತ, ಜ್ಞಾನವು ಜ್ಞಾನಿಯನ್ನು ಹೆಚ್ಚಾಗಿ ಸ್ಥಿರಪಡಿಸುತ್ತದೆ.