Ecclesiastes 7:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ. (Verses 27-28)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪ್ರಸಂಗಿಯು ಹೀಗೆ ಹೇಳುತ್ತಾನೆ, “ನೋಡು, ನಾನು ಇದನ್ನು ಹುಡುಕಿ ಕಂಡುಕೊಂಡಿದ್ದೇನೆ” ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ಉತ್ತರ ಸಿಕ್ಕಲಿಲ್ಲ.
Kannada BSI Bible 2016
ಇಗೋ, ಲೆಕ್ಕವನ್ನು ಕಂಡುಹಿಡಿಯಲು ಒಂದೊಂದನ್ನಾಗಿ ಎಣಿಸಿ ನಾನು ಇದನ್ನು ಕಂಡುಕೊಂಡೆ ನೆಂದು ಪ್ರಸಂಗಿ ಹೇಳುತ್ತಾನೆ:
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರಸಂಗಿಯು ಹೀಗೆ ಹೇಳುತ್ತಾನೆ - ನೋಡು, ನಾನು ತೀರ್ಮಾನವನ್ನು ನಿಶ್ಚಯಿಸಬೇಕೆಂದು ಒಂದೊಂದು ವಿಚಾರಿಸಿ ಒಂದು ವಿಷಯವನ್ನು ಕಂಡೆನು. ಎಷ್ಟು ಹುಡುಕುತ್ತಿದ್ದರೂ ಇದುವರೆಗೆ ಅದು ದೊರೆತಿರಲಿಲ್ಲ.
Kannada Bible (KNCL) BSI 2016
“ಹೌದು, ಒಂದಾದ ಮೇಲೊಂದನ್ನು ಆಲೋಚಿಸಿ ನಾನು ಇದನ್ನು ಕಂಡುಹಿಡಿದೆ” ಎನ್ನುತ್ತಾನೆ ಉಪದೇಶಕ. ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ನನಗೆ ಉತ್ತರ ಸಿಕ್ಕಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೋಡು, ನಾನಿದನ್ನು ಹುಡುಕಿ ಕಂಡುಕೊಂಡಿದ್ದೇನೆ,” ಎಂದು ಪ್ರಸಂಗಿಯು ಹೇಳುತ್ತಿದ್ದಾನೆ: ನಾನು ಒಂದರ ನಂತರ ಮತ್ತೊಂದನ್ನು ಕೂಡಿಸಿ, ಸಂಶೋಧನೆಗಳನ್ನು ನಡೆಸಿದೆ;