Ephesians 4:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
Kannada BSI Bible 2016
ನಾವು ಇನ್ನು ಮೇಲೆ ಹೊಂಚು ಹಾಕುವವರ ವಂಚನೆಗೂ ಮನುಷ್ಯರ ಕಪಟದಿಂದಲೂ ಮೋಸದ ಉಪಾಯ ಮಾಡುವ ತಂತ್ರದಿಂದಲೂ ಬೋಧನೆಯ ಪ್ರತಿಯೊಂದು ಗಾಳಿ ಯಿಂದಲೂ ಬಡಿಯಲ್ಪಟ್ಟು ಅತ್ತಿತ್ತ ನೂಕಾಡಲ್ಪಡುವ ಬಾಲಕರಂತೆ ಇರಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು.
Kannada Bible (KNCL) BSI 2016
ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ, ನಾವು ಚಿಕ್ಕಮಕ್ಕಳಂತೆ ಇರುವುದಿಲ್ಲ: ಮನುಷ್ಯರ ವಿವಿಧ ಬೋಧನೆಗಳಿಂದ ಗಾಳಿಯಿಂದ ತೂರಾಡಿಕೊಳ್ಳುವಂತಾಗುವುದಿಲ್ಲ. ಮನುಷ್ಯರ ಕುಯುಕ್ತಿಗೆ, ತಂತ್ರಕ್ಕೆ, ಒಳಸಂಚಿಗೆ ಒಳಗಾಗುವುದಿಲ್ಲ. ಅವರ ಪ್ರತಿಯೊಂದು ಬೋಧನೆಯ ಗಾಳಿಯಿಂದಲೂ ತೂರಾಡಿಕೊಂಡು ಅತ್ತಿತ್ತ ಅಲೆದಾಡುವ ಚಿಕ್ಕಮಕ್ಕಳಂತೆ ಇರಬಾರದು.