Esther 1:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇತರ ಅಧಿಕಾರಿಗಳು ಆಲಿಸುತ್ತಿದ್ದಾಗ ಮೆಮೂಕಾನ್ ಎದ್ದುನಿಂತು, “ರಾಣಿ ವಷ್ಟಿಯು ತಪ್ಪು ಮಾಡಿದಳು. ಇದು ರಾಜನಿಗೆ ವಿರುದ್ಧವಾಗಿ ಮಾತ್ರವೇ ಅಲ್ಲ, ರಾಜ್ಯದ ಸಕಲ ನಾಯಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ವಿರುದ್ಧವಾದದ್ದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಮೆಮೂಕಾನನು ಅರಸನ ಮತ್ತು ಸರದಾರರ ಮುಂದೆ, “ವಷ್ಟಿ ರಾಣಿಯ ಅಪರಾಧವು ಅರಸನೊಬ್ಬನಿಗೇ ವಿರುದ್ಧವಾದುದಲ್ಲ.
Kannada BSI Bible 2016
ಮೆಮುಕಾನನು ಅರಸನ ಮುಂದೆಯೂ ಪ್ರಧಾ ನರ ಮುಂದೆಯೂ ಹೇಳಿದ್ದೇನಂದರೆ -- ರಾಣಿಯಾದ ವಷ್ಟಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿರುವ ಸಮಸ್ತ ಪ್ರಧಾನರಿಗೂ ಸಮಸ್ತ ಜನರಿಗೂ ಅಪರಾಧ ಮಾಡಿ ದ್ದಾಳೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ವಷ್ಟಿರಾಣಿಯ ಅಪರಾಧವು ಅರಸನೊಬ್ಬನಿಗೇ ವಿರುದ್ಧವಾದದ್ದಲ್ಲ; ಅರಸನಾದ ಅಹಷ್ವೇರೋಷನಿಗೆ ಸೇರಿರುವ ಎಲ್ಲಾ ಸಂಸ್ಥಾನಗಳ ಸರದಾರರಿಗೂ ಜನರಿಗೂ ವಿರುದ್ಧವಾದದ್ದು.
Kannada Bible (KNCL) BSI 2016
ಅರಸನ ಮುಂದೆಯೂ ನೆರೆದಿದ್ದ ಪದಾಧಿಕಾರಿಗಳ ಮುಂದೆಯೂ ಇದಕ್ಕೆ ಉತ್ತರ ಈಯುತ್ತ ಮೆಮೂಕನು: “ವಷ್ಟಿರಾಣಿಯು ಬಗೆದಿರುವ ಅವಮಾನ ಅರಸನೊಬ್ಬನ ವಿರುದ್ಧ ಮಾತ್ರವಲ್ಲ, ಅರಸನ ರಾಜ್ಯದಲ್ಲಿರುವ ಎಲ್ಲಾ ಪದಾಧಿಕಾರಿಗಳ ಹಾಗೂ ಪ್ರಜೆಗಳ ವಿರುದ್ಧವೂ ಆಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೆಮೂಕಾನನು ಅರಸನ ಮುಂದೆಯೂ ಪ್ರಧಾನರ ಮುಂದೆಯೂ, “ವಷ್ಟಿ ರಾಣಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ಸಮಸ್ತ ಶ್ರೇಷ್ಠರಿಗೂ ಸಮಸ್ತ ಜನರಿಗೂ ಅಪರಾಧಮಾಡಿದ್ದಾಳೆ.