Esther 2:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸರದಿಯ ಪ್ರಕಾರ ಒಬ್ಬ ಕನ್ಯೆಯನ್ನು ಅರಸನ ಬಳಿಗೆ ಕರೆದೊಯ್ಯುವ ಮೊದಲು ಆಕೆಯು ಹನ್ನೆರಡು ತಿಂಗಳು ಕಾಲ ಸೌಂದರ್ಯೋಪಾಸನದ ವಿಧಿಕ್ರಮಗಳನ್ನೆಲ್ಲಾ ನೆರವೇರಿಸಿರಬೇಕು. ಆರುತಿಂಗಳ ಕಾಲ ರಕ್ತಬೋಳದ ಎಣ್ಣೆಯ ಅಭ್ಯಂಜನದಿಂದಲೂ ನಂತರದ ಆರುತಿಂಗಳು ಕಾಂತಿವರ್ಧಕ ಲೇಪನ, ಸುಗಂಧವಸ್ತುಗಳಿಂದ ಆಕೆಯು ಸೌಂದರ್ಯದ ಆರೈಕೆ ಮಾಡಿಸಿಕೊಳ್ಳಬೇಕಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ, ಪರಿಮಳದ್ರವ್ಯ ಕಾಂತಿವರ್ಧಕದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಳಗಳೂ ಅಂತು ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜನ ಅರಮನೆಯ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗಬೇಕಾಗಿತ್ತು.
Kannada BSI Bible 2016
ಆದರೆ ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಬೋಳ ತೈಲದಿಂದಲೂ ಆರು ತಿಂಗಳು ಸುಗಂಧಗ ಳಿಂದಲೂ ಸ್ತ್ರೀಯರು ಶುಚಿಮಾಡಿಕೊಳ್ಳತಕ್ಕವುಗ ಳಿಂದಲೂ ಶುಚಿಯಾಗುವ ದಿವಸಗಳನ್ನು ತೀರಿಸಿದರು. ಹೀಗೆಯೇ ಸ್ತ್ರೀಯರ ಮರ್ಯಾದೆಯ ಪ್ರಕಾರ ಹನ್ನೆ ರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇ ರೋಷನ ಬಳಿಗೆ ಹೋಗಲು ಅವರವರ ಸರದಿ ಬಂತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕನ್ಯೆಯರ ಲೇಪನಕಾಲವು ಪೂರೈಸುವದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ ಪರಿಮಳ ದ್ರವ್ಯ ಕಾಂತಿವರ್ಧಕ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳೂ ಅಂತೂ ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜಸ್ತ್ರೀಯರ ವಿಷಯವಾದ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗುವಳು.
Kannada Bible (KNCL) BSI 2016
ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಸುಗಂಧತೈಲದ ಪ್ರಯೋಗದಲ್ಲಿ ಆರು ತಿಂಗಳು, ಕಾಂತಿವರ್ಧಕ ಪರಿಮಳ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳು ಹೀಗೆ ಒಂದು ವರ್ಷ ಕಳೆಯಿತು. ಇದಾದನಂತರ ಪದ್ಧತಿಯ ಪ್ರಕಾರ ಸಿಂಗರಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ತನ್ನ ಸರದಿಯಂತೆ ಅರಸನ ಬಳಿಗೆ ಹೋಗಬೇಕಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಸುಗಂಧ ತೈಲದಿಂದಲೂ ಆರು ತಿಂಗಳು ಸೌಂದರ್ಯವರ್ಧಕ ಸಾಧನಗಳಿಂದಲೂ ಕನ್ಯೆಯರ ಲೇಪನಕಾಲದ ಪ್ರಕಾರ ಹನ್ನೆರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇರೋಷನ ಬಳಿಗೆ ಪ್ರತಿಯೊಬ್ಬ ಕನ್ಯೆಯು ಹೋಗಲು ಅವರವರ ಸರದಿ ಬರುತ್ತಿತ್ತು.