Esther 2:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೊರ್ದೆಕೈಗೆ ಈ ವಿಷಯ ಗೊತ್ತಾದಾಗ ಅವನು ಎಸ್ತೇರಳಿಗೆ ತಿಳಿಸಿದನು. ಎಸ್ತೇರ್ ರಾಣಿಯು ಇದನ್ನು ಕೊಡಲೇ ಅರಸನಿಗೆ ತಿಳಿಸಿದಳು. ಅಷ್ಟೇ ಅಲ್ಲ, ಮೊರ್ದೆಕೈ ಎಂಬವನು ಈ ಒಳಸಂಚನ್ನು ಕಂಡುಹಿಡಿದು ತನಗೆ ತಿಳಿಸಿದನು ಎಂಬದಾಗಿಯೂ ಅರಸನಿಗೆ ವರದಿ ಮಾಡಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್ ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.
Kannada BSI Bible 2016
ಈ ಕಾರ್ಯವು ಮೊರ್ದೆ ಕೈಯಿಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು; ಎಸ್ತೇರಳು ಮೊರ್ದೆ ಕೈಯಿಯ ಹೆಸರಿನಲ್ಲಿ ಅದನ್ನು ಅರಸನಿಗೆ ತಿಳಿಸಿದಳು.ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು. ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್‍ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.
Kannada Bible (KNCL) BSI 2016
ಈ ವಿಷಯ ಮೊರ್ದೆಕೈಗೆ ತಿಳಿದುಬಂದಾಗ, ಆತನು ಎಸ್ತೇರಳಿಗೆ ತಿಳಿಸಿದನು. ರಾಣಿಯು ಅವನ ಹೆಸರನ್ನು ಅರಸನಿಗೆ ಹೇಳಿ ಅವರು ನಡೆಸುತ್ತಿದ್ದ ಆ ಪಿತೂರಿ ಬಗ್ಗೆ ತಿಳಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಕಾರ್ಯವು ಮೊರ್ದೆಕೈಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು. ಎಸ್ತೇರಳು ಮೊರ್ದೆಕೈಯ ಹೆಸರನ್ನು ಅರಸನಿಗೆ ಹೇಳಿ ಆ ಒಳಸಂಚಿನ ಬಗ್ಗೆ ತಿಳಿಸಿದಳು.