Esther 2:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕೂಡಲೇ ವಿಚಾರಣೆ ನಡೆಸಿದಾಗ ಮೊರ್ದೆಕೈಯು ಹೇಳಿದ ವಿಷಯವು ಸತ್ಯ ಎಂದು ಗೊತ್ತಾಯಿತು. ಆ ಎರಡು ದ್ವಾರಪಾಲಕರನ್ನು ಹಿಡಿದು ಗಲ್ಲಿಗೇರಿಸಿದರು. ಈ ಎಲ್ಲಾ ಸಮಾಚಾರವನ್ನು ರಾಜನ ಬಳಿಯಲ್ಲಿರುವ ರಾಜಕಾಲ ವೃತ್ತಾಂತ ಪುಸ್ತಕದಲ್ಲಿ ಬರೆಯಲ್ಪಟ್ಟವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ವಿಷಯವು ವಿಚಾರಣೆಗೆ ಬಂದಾಗ ಅದು ನಿಜವೆಂದು ಸಾಬೀತಾದುದರಿಂದ ಆ ಇಬ್ಬರನ್ನೂ ಗಲ್ಲಿಗೆ ಹಾಕಿಸಿದರು. ಆ ಸಂಗತಿಯು ರಾಜನ ದಿನಚರಿಪುಸ್ತಕದಲ್ಲಿ ಬರೆದು ದಾಖಲಿಸಲಾಯಿತು.
Kannada BSI Bible 2016
ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು. ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ವಿಷಯವು ವಿಚಾರಣೆಗೆ ಬಂದಾಗ ಅದು ನಿಜವೆಂದು ಸ್ಥಾಪನೆಯಾದದರಿಂದ ಆ ಇಬ್ಬರನ್ನೂ ಗಲ್ಲಿಗೆ ಹಾಕಿದರು. ಆ ಸಂಗತಿಯು ರಾಜನ ದಿನಚರ್ಯಪುಸ್ತಕದಲ್ಲಿ ಬರೆಯಲ್ಪಟ್ಟಿತು.
Kannada Bible (KNCL) BSI 2016
ಈ ವಿಷಯ ವಿಚಾರಣೆಗೆ ಬಂದು ಅದು ಸತ್ಯಸಂಗತಿಯೆಂದು ರುಜುವಾತು ಆಗಲು, ಆ ಇಬ್ಬರು ಪಿತೂರಿಗಾರರನ್ನು ಗಲ್ಲಿಗೇರಿಸಲಾಯಿತು. ಈ ಸಂಗತಿಯನ್ನು ರಾಜನ ದಿನಚರಿಯ ಪುಸ್ತಕದಲ್ಲಿ ಬರೆದಿಡಲಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ವಿಷಯ ವಿಚಾರಣೆಗೆ ಬಂದಾಗ ನಿಜವೆಂದು ಗೊತ್ತಾಯಿತು. ಆಗ ಆ ಇಬ್ಬರು ಅಧಿಕಾರಿಗಳನ್ನೂ ಗಲ್ಲಿಗೇರಿಸಲಾಯಿತು. ಇವೆಲ್ಲವನ್ನೂ ಅರಸನ ಮುಂದೆ ಇರುವ ರಾಜನ ಇತಿಹಾಸಗಳ ಪುಸ್ತಕದಲ್ಲಿ ಬರೆದಿಡಲಾಯಿತು.