Esther 2:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನಂತರ ರಾಜನಿಗೆ ಇಷ್ಟವಾದ ಕನ್ನಿಕೆಯನ್ನು ವಷ್ಟಿಯ ಬದಲಾಗಿ ರಾಣಿಯನ್ನಾಗಿ ಮಾಡಲಿ” ಎಂದು ಹೇಳಿದರು. ಅವರ ಸಲಹೆ ರಾಜನಿಗೆ ಸರಿಯೆನಿಸಿದ್ದರಿಂದ ಅವನು ಅದಕ್ಕೆ ಒಪ್ಪಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ಯಾವ ಕನ್ಯೆಯನ್ನು ಇಷ್ಟಪಡುವನೋ ಆ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ” ಎಂದು ಹೇಳಿದರು. ಅರಸನು ಅವರ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು.
Kannada BSI Bible 2016
ಅರಸನ ಕಣ್ಣು ಗಳಿಗೆ ಚೆನ್ನಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಅಂದನು. ಈ ಮಾತು ಅರಸನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಹಾಗೆಯೇ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಅರಸನಿಗೆ ಇಷ್ಟಳಾಗಿ ಕಾಣುವ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಎಂದು ಹೇಳಿದರು. ಅರಸನು ಈ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು.
Kannada Bible (KNCL) BSI 2016
ಯಾವ ಕನ್ಯೆಯು ಅರಸನಿಗೆ ಸುಪ್ರೀತಳಾಗಿ ಕಾಣುವಳೋ ಅವಳು ವಷ್ಟಿರಾಣಿಯ ಬದಲಾಗಿ ಪಟ್ಟದರಸಿಯಾಗಬೇಕು,” ಎಂದು ಹೇಳಿದರು. ಅವರ ಈ ಸಲಹೆ ಅರಸನಿಗೆ ಸೂಕ್ತವೆಂದು ತೋರಿಬರಲು ಅವನು ಅದೇ ಪ್ರಕಾರ ಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು.