Esther 4:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಎಸ್ತೇರಳು ಈ ಉತ್ತರವನ್ನು ಮೊರ್ದೆಕೈಗೆ ಕಳುಹಿಸಿದಳು: “ಮೊರ್ದೆಕೈ, ನೀನು ಹೋಗಿ ಶೂಷನ್‌ನಲ್ಲಿರುವ ಎಲ್ಲಾ ಯೆಹೂದ್ಯರನ್ನು ಒಟ್ಟಿಗೆ ಸೇರಿಸಿ ನನಗಾಗಿ ಉಪವಾಸವಿರಲು ಅವರಿಗೆ ಹೇಳು. ಮೂರು ದಿನ ಹಗಲುರಾತ್ರಿ ಊಟಮಾಡಲೂಬಾರದು ಕುಡಿಯಲೂಬಾರದು. ನಾನೂ ನಿಮ್ಮ ಹಾಗೆ ಉಪವಾಸದಿಂದಿರುವೆನು. ನನ್ನೊಂದಿಗೆ ನನ್ನ ಸೇವಕಿಯರೂ ಉಪವಾಸ ಮಾಡುವರು. ನಾವು ಉಪವಾಸ ಮಾಡಿದ ಬಳಿಕ ನಾನು ರಾಜನ ಬಳಿಗೆ ಹೋಗುವೆನು. ಆತನು ಕರೆಯದೆ ನಾನು ಆತನ ಬಳಿಗೆ ಹೋಗುವುದು ನ್ಯಾಯಬಾಹಿರ. ಆದರೂ ನಾನು ಹೋಗುವೆನು, ನಾನು ಸಾಯಬೇಕಾದರೆ ಸಾಯುವೆನು.” (Verses 15-16)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಎಸ್ತೇರಳು ಮೊರ್ದೆಕೈಗೆ, “ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು;
Kannada BSI Bible 2016
ಎಸ್ತೇರಳು ಮೊರ್ದೆಕೈಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ -- ನೀನು ಹೋಗಿ ಶೂಷನಿನಲ್ಲಿರುವ ಸಮಸ್ತ ಯೆಹೂದ್ಯರನ್ನು ಕೂಡಿಸಿ ನನಗೋಸ್ಕರ ರಾತ್ರಿ ಹಗಲೂ ಮೂರು ದಿವಸ ತಿನ್ನದೆಯೂ ಕುಡಿಯದೆಯೂ ಉಪವಾಸ ಮಾಡಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಎಸ್ತೇರಳು - ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿ ಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ ಎಂದು ಮೊರ್ದೆಕೈಗೆ ಮರಳಿ ಹೇಳಿಸಿದಳು.
Kannada Bible (KNCL) BSI 2016
ಆಗ ಎಸ್ತೇರಳು ಮೊರ್ದೆಕೈಯನಿಗೆ, “ನೀನು ಹೋಗಿ ಶೂಷನ್ ನಗರದಲ್ಲಿ ಇರುವ ಯೆಹೂದ್ಯರನ್ನೆಲ್ಲಾ ಸಭೆಸೇರಿಸು. ಎಲ್ಲರೂ ಹಗಲಿರುಳೆನ್ನದೆ ಮೂರು ದಿನ ಅನ್ನಪಾನಗಳನ್ನು ತೊರೆದು ನನಗೋಸ್ಕರ ಉಪವಾಸವನ್ನು ಕೈಗೊಳ್ಳಲಿ. ನನ್ನ ದಾಸಿಯರೊಡನೆ ನಾನೂ ಉಪವಾಸ ಕೈಗೊಳ್ಳುವೆನು. ಅನಂತರ ಅರಸನ ಆಜ್ಞೆಯನ್ನು ಮೀರಿಯಾದರೂ ನಾನು ಆತನ ಬಳಿಗೆ ಹೋಗುವೆನು, ಸತ್ತರೂ ಸಾಯುವೆನು,” ಎಂದು ಹೇಳಿಕಳುಹಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ,