Esther 8:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಕೆ ಅರಸನಿಗೆ, “ನೀವು ನನ್ನನ್ನು ಇಷ್ಟಪಡುವುದಾದರೆ ಮತ್ತು ನಿಮಗೆ ಮೆಚ್ಚಿಕೆಯಾದರೆ ನೀವು ನನ್ನ ಈ ಬಿನ್ನಹವನ್ನು ಪೂರೈಸಬೇಕು. ಅದೇನೆಂದರೆ, ರಾಜನ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ನಾಶಮಾಡಬೇಕೆಂದು ಹಾಮಾನನು ಹೊರಡಿಸಿರುವ ಆಜ್ಞೆಯನ್ನು ರದ್ದುಮಾಡಲು ನೀವು ಇನ್ನೊಂದು ಆಜ್ಞೆಯನ್ನು ಹೊರಡಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಎಸ್ತೇರಳು ಅವನಿಗೆ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಒಳ್ಳೆಯದೆಂದು ಅದಕ್ಕೆ ಸಮ್ಮತಿಸುವುದಾದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ವಿಷಯವಾಗಿ ಅಗಾಗನ ವಂಶದವನೂ, ಹಮ್ಮೆದಾತನ ಮಗನು ಆದ ಹಾಮಾನನು ಬರೆಯಿಸಿದ ಪತ್ರವನ್ನು ರದ್ದುಮಾಡುವುದಕ್ಕಾಗಿ ಆಜ್ಞಾಪತ್ರವನ್ನು ಪ್ರಕಟಿಸಬೇಕು.
Kannada BSI Bible 2016
ಅರಸನಿಗೆ ಒಳ್ಳೇದಾಗಿದ್ದರೆ, ಅವನ ಸಮ್ಮುಖದಲ್ಲಿ ನಾನು ದಯೆಹೊಂದಿದ ವಳಾದರೆ, ಕಾರ್ಯವು ಅರಸನಿಗೆ ಯುಕ್ತವಾಗಿ ಕಾಣಿಸಲ್ಪಟ್ಟರೆ, ನಾನು ಅವನ ಸಮ್ಮುಖದಲ್ಲಿ ಒಳ್ಳೆಯ ವಳೆಂದು ಕಾಣಿಸಲ್ಪಟ್ಟರೆ, ಅರಸನ ಸಮಸ್ತ ಪ್ರಾಂತ್ಯ ಗಳಲ್ಲಿರುವ ಯೆಹೂದ್ಯರನ್ನು ನಾಶಮಾಡುವದಕ್ಕೆ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನು ಯೋಚಿಸಿ ಬರೆದ ಪತ್ರಗಳು ರದ್ದುಮಾಡಲ್ಪಡುವಂತೆ ಬರೆಯಲ್ಪಡಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ನನ್ನನ್ನು ಮೆಚ್ಚಿ ನಾನು ಹೇಳುವ ಮಾತು ಉಚಿತವಾದದ್ದೆಂದೆಣಿಸಿ ಅದಕ್ಕೆ ಸಮ್ಮತಿಸುವದಾದರೆ ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವದರ ವಿಷಯವಾಗಿ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಬರಿಸಿದ ಪತ್ರಗಳನ್ನು ರದ್ದುಮಾಡುವದಕ್ಕಾಗಿ ರಾಯಸವನ್ನು ಪ್ರಕಟಿಸಬೇಕು.
Kannada Bible (KNCL) BSI 2016
“ತಾವು ನನ್ನ ಮೇಲೆ ಕೃಪಾಕಟಾಕ್ಷವಿರಿಸಿ, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಸಮಂಜಸವಾದುದೆಂದು ಎಣಿಸಿ, ಅದಕ್ಕೆ ಸಮ್ಮತಿಸುವುದಾದರೆ, ತಮ್ಮ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ಸಲುವಾಗಿ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಬರೆಸಿದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳು, “ಅರಸನಿಗೆ ನನ್ನ ಮೇಲೆ ದಯೆಯಿದ್ದರೆ, ಈ ಕಾರ್ಯವು ಅರಸನಿಗೆ ಸರಿ ಎಂದೆಣಿಸಿದರೆ, ಅರಸನು ನನ್ನನ್ನು ಮೆಚ್ಚಿದ್ದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಕೊಂದುಹಾಕುವುದಕ್ಕೆ, ಅಗಾಗನ ವಂಶದ ಹಮ್ಮೆದಾತನ ಮಗ ಹಾಮಾನನು ಬರೆದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು.