Esther 8:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಜನರಿಗೆ ಭಯಂಕರವಾದ ಆ ಪರಿಸ್ಥತಿ ಉಂಟಾಗುವುದನ್ನಾಗಲಿ ನನ್ನ ಕುಟಂಬವು ಕೊಲ್ಲಲ್ಪಡುವುದನ್ನು ಕಣ್ಣಾರೆ ನೋಡುವುದಕ್ಕಾಗಲಿ ನನಗೆ ಸಾಧ್ಯವಿಲ್ಲದಿರುವುದರಿಂದ ರಾಜನಲ್ಲಿ ಬೇಡಿಕೊಳ್ಳುತ್ತಿದ್ದೇನೆ” ಎಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಸಹಿಸಿಕೊಂಡಿರುವುದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?” ಎಂದು ಬಿನ್ನವಿಸಿದಳು.
Kannada BSI Bible 2016
ಯಾಕಂದರೆ ನನ್ನ ಜನರ ಮೇಲೆ ಬರುವ ಕೆಡನ್ನು ನಾನು ನೋಡಿ ಹೇಗೆ ಸಹಿಸಲಿ? ಇಲ್ಲವೆ ನನ್ನ ಬಂಧುಗಳ ನಾಶನವನ್ನು ನಾನು ನೋಡಿ ಹೇಗೆ ಸಹಿಸಲಿ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಜನರಿಗೆ ಕೇಡು ಸಂಭವಿಸುವದನ್ನು ನೋಡಿ ನಾನು ಸಹಿಸುವದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವದು ಹೇಗೆ ಎಂದು ಬಿನ್ನವಿಸಿದಳು.
Kannada Bible (KNCL) BSI 2016
ನನ್ನ ಜನರಿಗೆ ಕೇಡು ಸಂಭವಿಸುವುದನ್ನು ಕಣ್ಣಾರೆ ಕಂಡು ನಾನು ಹೇಗೆ ತಾನೆ ಸಹಿಸಲಿ? ನನ್ನ ಕುಲನಾಶವನ್ನು ಕಂಡು ಸುಮ್ಮನಿರುವುದಾದರೂ ಹೇಗೆ?” ಎಂದು ಬಿನ್ನವಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಹೇಗೆ ಸಹಿಸಲಿ? ಇಲ್ಲವೆ ನನ್ನ ಕುಟುಂಬದ ನಾಶವನ್ನು ನಾನು ನೋಡಿ ಹೇಗೆ ಸಹಿಸಲಿ?” ಎಂದಳು.