Esther 9:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದಾರ್ ತಿಂಗಳಿನ ಹದಿಮೂರನೇ ಮತ್ತು ಹದಿನಾಲ್ಕನೇ ದಿವಸಗಳಲ್ಲಿ ಶೂಷನ್ ನಗರದ ಯೆಹೂದ್ಯರು ಒಟ್ಟಾಗಿ ಸೇರಿಬಂದು ಹದಿನೈದನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಹದಿನೈದನೆಯ ದಿವಸವನ್ನು ಅವರು ಸಂತಸದ ಹಬ್ಬವನ್ನಾಗಿ ಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಶೂಷನಿನ ಯೆಹೂದ್ಯರು ಹದಿಮೂರನೆಯ ಮತ್ತು ಹದಿನಾಲ್ಕನೆಯ ದಿನಗಳನ್ನು ವೈರಿಗಳನ್ನು ವಧಿಸುವುದಕ್ಕೆ ನೇಮಿಸಿಕೊಂಡಿದ್ದರಿಂದ ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡು ಆ ದಿನವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು.
Kannada BSI Bible 2016
ಆದರೆ ಶೂಷನಿನಲ್ಲಿರುವ ಯೆಹೂದ್ಯರು ಅದರ ಹದಿಮೂರನೇ ದಿವಸದಲ್ಲಿಯೂ ಹದಿನಾಲ್ಕನೇ ದಿವಸದಲ್ಲಿಯೂ ಕೂಡಿಕೊಂಡರು. ಅದರ ಹದಿನೈದನೇ ದಿವಸದಲ್ಲಿ ಅವರು ವಿಶ್ರಾಂತಿ ಯಾಗಿದ್ದು ಅದನ್ನು ಹಬ್ಬದ ಸಂತೋಷದ ದಿವಸವಾಗಿ ಮಾಡಿದರು;
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಶೂಷನಿನ ಯೆಹೂದ್ಯರು ಹದಿಮೂರನೆಯ ಮತ್ತು ಹದಿನಾಲ್ಕನೆಯ ದಿನಗಳಲ್ಲಿ [ವೈರಿಗಳನ್ನು ವಧಿಸುವದಕ್ಕೆ] ಕೂಡಿಕೊಂಡಿದ್ದದರಿಂದ ಹದಿನೈದನೆಯ ದಿನದಲ್ಲಿ ವಿಶ್ರವಿುಸಿಕೊಂಡು ಆ ದಿನವನ್ನು ಉತ್ಸವಭೋಜನದಿನವನ್ನಾಗಿ ಆಚರಿಸಿದರು.
Kannada Bible (KNCL) BSI 2016
ಶೂಷನಿನ ಯೆಹೂದ್ಯರು ಹದಿಮೂರನೇ ಹಾಗೂ ಹದಿನಾಲ್ಕನೇ ದಿನ ಒಟ್ಟಾಗಿ ಸೇರಿಬಂದುದರಿಂದ, ಅವರು ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಶೂಷನಿನಲ್ಲಿದ್ದ ಯೆಹೂದ್ಯರು ಹದಿಮೂರನೆಯ ಹಾಗೂ ಹದಿನಾಲ್ಕನೆಯ ದಿನಗಳಲ್ಲಿ ಒಟ್ಟಾಗಿ ಸೇರಿಬಂದದ್ದರಿಂದ, ಹದಿನೈದನೆಯ ದಿನದಲ್ಲಿ ಅವರು ವಿಶ್ರಮಿಸಿಕೊಂಡು, ಅದೇ ದಿನವನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.