Esther 9:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಗಾನನ ವಂಶದವನಾದ ಹಮ್ಮೆದಾತನ ಮಗನಾದ ಹಾಮಾನನು ಸಮಸ್ತ ಯೆಹೂದ್ಯರ ಶತ್ರುವಾಗಿದ್ದನು. ಯೆಹೂದ್ಯರನ್ನೆಲ್ಲಾ ಸಂಹರಿಸಲು ಆತನು ಒಂದು ದುಷ್ಟ ಹಂಚಿಕೆಯನ್ನು ಹೂಡಿದನು; ಮತ್ತು ಆ ನಿರ್ಧಿಷ್ಟ ದಿನಕ್ಕಾಗಿ ಅವನು ಚೀಟು ಹಾಕಿದನು. ಆ ದಿವಸಗಳಲ್ಲಿ ಚೀಟು ಹಾಕುವುದಕ್ಕೆ “ಪೂರ್” ಎಂದು ಹೇಳುತ್ತಿದ್ದರು. ಹಾಗೆ ಆ ಹಬ್ಬವು “ಪೂರಿಮ್” ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಲಾ ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡು ಅವರನ್ನು ತಳಮಳಗೊಳಿಸಿ ಹಾಳುಮಾಡುವುದರ ವಿಷಯವಾಗಿ ಪೂರ್ ಅಂದರೆ ಚೀಟನ್ನು ಹಾಕಿಸಿದನಲ್ಲಾ.
Kannada BSI Bible 2016
ಸಮಸ್ತ ಯೆಹೂದ್ಯರಿಗೂ ವೈರಿಯಾದ, ಅಗಾಗ ನಾದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ನಾಶ ಮಾಡಲು ಯೋಚನೆ ಮಾಡಿ ಕೊಂಡು ಅವರನ್ನು ಹಾಳುಮಾಡುವ ಹಾಗೆಯೂ ನಾಶಮಾಡುವ ಹಾಗೆಯೂ ಪೂರೆಂಬ ಚೀಟನ್ನು ಹಾಕಿದನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಲಾ ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡು ಅವರನ್ನು ತಳಮಳಗೊಳಿಸಿ ಹಾಳು ಮಾಡುವದರ ವಿಷಯವಾಗಿ ಪೂರನ್ನು ಅಂದರೆ ಚೀಟನ್ನು ಹಾಕಿಸಿದನಲ್ಲಾ.
Kannada Bible (KNCL) BSI 2016
ಯೆಹೂದ್ಯರೆಲ್ಲರ ಕಡುವೈರಿಯಾಗಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರನ್ನು ಅಂದರೆ ಚೀಟನ್ನು ಹಾಕಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಸಮಸ್ತ ಯೆಹೂದ್ಯರಿಗೂ ಕಡು ವೈರಿಯಾದ, ಅಗಾಗನ ವಂಶದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರ್ ಅಂದರೆ, ಚೀಟನ್ನು ಹಾಕಿದ್ದನು.