Esther 9:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮತ್ತು ಪತ್ರದಲ್ಲಿ ಪೂರಿಮ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿರಿ ಎಂದೂ ಬರೆದಿದ್ದನು. ಈ ಹಬ್ಬವನ್ನು ಯಾವ ದಿನ ಆಚರಿಸಬೇಕು ಎಂಬುದನ್ನೂ ನಮೂದಿಸಿದನು. ಈ ಎರಡು ವಿಶ್ರಾಂತಿ ದಿನಗಳನ್ನು ತಮಗೂ ತಮ್ಮ ಸಂತಾನಗಳವರಿಗೂ ಖಾಯಂಗೊಳಿಸಲು ಯೆಹೂದಿಯಾದ ಮೊರ್ದೆಕೈಯೂ ರಾಣಿ ಎಸ್ತೇರಳೂ ಯೆಹೂದ್ಯರಿಗೆ ಒಂದು ಆಜ್ಞೆಯನ್ನು ಹೊರಡಿಸಿದರು. ತಮಗೆ ಸಂಬಂಧಿಸಿದ ಕೆಟ್ಟಸಂಗತಿಗಳನ್ನು ನೆನಪಿಗೆ ತಂದುಕೊಂಡು ಬೇರೆ ವಿಶ್ರಾಂತಿ ದಿನಗಳಲ್ಲಿ ಉಪವಾಸವಿದ್ದು ಗೋಳಾಡುವಂತೆ ಈ ಹಬ್ಬದ ದಿನಗಳಲ್ಲಿಯೂ ಅವರು ಮಾಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ದಯಾಸತ್ಯತೆಗಳುಳ್ಳ ಮಾತುಗಳಿಂದ ಆ ಪತ್ರಗಳಲ್ಲಿ, “ಯೆಹೂದ್ಯರು ತಮ್ಮಲ್ಲಿಯೂ ಮತ್ತು ತಮ್ಮ ಸಂತಾನದವರಲ್ಲಿಯೂ ಉಪವಾಸ ಮತ್ತು ಪ್ರಲಾಪ ದಿನಗಳನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರೀಮ್ ದಿನಗಳನ್ನೂ ನನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯ ನಿರೂಪದಂತೆ ಪ್ರತಿವರ್ಷ ತಪ್ಪದೆ ನೇಮಿತವಾದ ಕಾಲದಲ್ಲಿ ಆಚರಿಸಬೇಕು” ಎಂದು ಬರೆದಿದ್ದಳು.
Kannada BSI Bible 2016
ಅವುಗಳ ನೇಮಕದ ಕಾಲಗಳಲ್ಲಿ ಸ್ಥಿರಪಡಿಸುವ ದಕ್ಕೂ ಅವರ ಉಪವಾಸದ ಮೊರೆಯಿಡುವಿಕೆಯ ಕಾರ್ಯಗಳನ್ನು ತಿಳಿಸುವದಕ್ಕೂ ಸಮಾಧಾನವೂ ಸತ್ಯವೂ ಆದ ಮಾತುಗಳಿಂದ ಅಹಷ್ವೇರೋಷನ ರಾಜ್ಯದ ನೂರ ಇಪ್ಪತ್ತೇಳು ಪ್ರಾಂತ್ಯಗಳಲ್ಲಿರುವ ಸಮಸ್ತ, ಯೆಹೂದ್ಯರಿಗೆ ಪತ್ರಗಳನ್ನು ಕಳುಹಿಸಿದರು.ಹೀಗೆಯೇ ಎಸ್ತೇರಳ ಆಜ್ಞೆಯು ಈ ಪೂರೀಮೆಂಬ ದಿವಸಗಳ ಕಾರ್ಯಗಳನ್ನು ಸ್ಥಿರಪಡಿಸಿದರಿಂದ ಅದು ಪುಸ್ತಕದಲ್ಲಿ ಬರೆಯಲ್ಪಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ದಯಾಸತ್ಯತೆಗಳುಳ್ಳ ಮಾತುಗಳಿಂದ ಆ ಪತ್ರಗಳಲ್ಲಿ - ಯೆಹೂದ್ಯರು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ಉಪವಾಸಪ್ರಲಾಪ ದಿನಗಳನ್ನು ಪ್ರತಿವರುಷ ತಪ್ಪದೆ ಆಚರಿಸಬೇಕೆಂದು ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರೀಮ್ ದಿನಗಳನ್ನೂ ನನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯ ನಿರೂಪದಂತೆ ಪ್ರತಿವರುಷ ತಪ್ಪದೆ ನೇವಿುತವಾದ ಕಾಲದಲ್ಲಿ ಆಚರಿಸಬೇಕು ಎಂದು ಬರೆದಿದ್ದಳು.
Kannada Bible (KNCL) BSI 2016
ದಯೆ ಹಾಗೂ ಸತ್ಯತೆಯ ಮಾತುಗಳಿಂದ ತುಂಬಿದ್ದ ಆ ಪತ್ರಗಳಲ್ಲಿ ಎಸ್ತೇರಳು, “ಯೆಹೂದ್ಯರು ತಾವೂ ತಮ್ಮ ಸಂತತಿಯವರೆಲ್ಲರೂ ಉಪವಾಸ, ಪ್ರಲಾಪದಿನಗಳನ್ನು ಪ್ರತಿವರ್ಷ ತಪ್ಪದೆ ಆಚರಿಸಬೇಕು; ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರಿಮ್ ದಿನಗಳನ್ನು ತನ್ನ ಮತ್ತು ಯೆಹೂದ್ಯನಾದ ಮೊರ್ದಕೈಯ ಆದೇಶದಂತೆ ಪ್ರತಿವರ್ಷವೂ ನಿಯಮಿತ ಕಾಲದಲ್ಲಿ ತಪ್ಪದೆ ಆಚರಿಸಬೇಕು,” ಎಂದು ಬರೆದಿದ್ದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಈ ಪೂರಿಮ್ ದಿನಗಳನ್ನು ಯೆಹೂದ್ಯನಾದ ಮೊರ್ದೆಕೈಯೂ ರಾಣಿಯಾದ ಎಸ್ತೇರಳೂ ಎಲ್ಲಾ ಯೆಹೂದ್ಯರಿಗೂ, ಅವರ ಸಂತಾನದವರಿಗೂ ಉಪವಾಸ ಮಾಡಿ, ದುಃಖಿಸುವ ಕಾಲವನ್ನು ಸ್ಥಿರಪಡಿಸಿದ ಪ್ರಕಾರವೇ ಈ ಪೂರಿಮ್ ದಿನವನ್ನು ಸ್ಥಿರಪಡಿಸುವುವಂತೆ ಆಜ್ಞಾಪಿಸಿದ್ದರು.