Exodus 1:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಫರೋಹನು ತನ್ನ ಜನರಿಗೆಲ್ಲಾ, “ಇಬ್ರಿಯರಿಗೆ ಹುಟ್ಟುವ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದುಬಿಡಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳು ಬದುಕಲಿ” ಎಂದು ಆಜ್ಞಾಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.
Kannada BSI Bible 2016
ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ಫರೋಹನು ತನ್ನ ಜನರಿಗೆಲ್ಲಾ - [ಇಬ್ರಿಯರ] ಗಂಡುಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು ಎಂದು ಆಜ್ಞೆ ಮಾಡಿದನು.
Kannada Bible (KNCL) BSI 2016
ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, \ಹಿಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು,” ಎಂದು ಆಜ್ಞೆಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.