Exodus 10:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ” ಎಂದು ಹೇಳಿ ಅವರನ್ನು ಫರೋಹನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
Kannada BSI Bible 2016
ಹಾಗೆ ಮಾಡದೆ ಈಗ ಗಂಡಸರಾದ ನೀವು ಹೋಗಿ ಕರ್ತನಿಗೆ ಸೇವೆಮಾಡಿರಿ; ಇದನ್ನೇ ನೀವು ಬಯಸಿದಿರಿ ಅಂದನು. ತರುವಾಯ ಅವರು ಫರೋಹನ ಎದುರಿನಿಂದ ಹೊರದೂಡಲ್ಪಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು; ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ ಎಂದು ಹೇಳಿ ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
Kannada Bible (KNCL) BSI 2016
ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಸರ್ವೇಶ್ವರನನ್ನು ಆರಾಧಿಸಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೆ?” ಎಂದು ಹೇಳಿ ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆ ಮಾಡದೆ, ಗಂಡಸರಾದ ನೀವು ಮಾತ್ರ ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಏಕೆಂದರೆ ಇದನ್ನೇ ನೀವು ಬಯಸಿದಿರಿ,” ಎಂದನು. ತರುವಾಯ ಫರೋಹನು ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.