Exodus 13:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ನಮ್ಮ ಜನರು ಐಗುಪ್ತ ದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ಈ ಆಚರಣೆಯನ್ನು ಆಚರಿಸುತ್ತೇವೆ.
Kannada BSI Bible 2016
ಆ ದಿನದಲ್ಲಿ ನಿನ್ನ ಮಗನಿಗೆ ತಿಳಿಸಿ ಹೇಳಬೇಕಾದದ್ದೇನಂದರೆ--ನಾನು ಐಗುಪ್ತದಿಂದ ಹೊರಗೆ ಬಂದಾಗ ಕರ್ತನು ನನಗೆ ಮಾಡಿದ್ದಕ್ಕಾಗಿ ಇದು ಆಚರಿಸಲ್ಪಡುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ - ನಮ್ಮ ಜನವು ಐಗುಪ್ತದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಸುವದಕ್ಕಾಗಿ ಈ ಆಚರಣೆಯನ್ನು ನಡಿಸುತ್ತೇವೆಂಬದಾಗಿ ತಿಳಿಸಬೇಕು.
Kannada Bible (KNCL) BSI 2016
ಆ ದಿನ ನೀವು ನಿಮ್ಮ ಮಕ್ಕಳಿಗೆ, “ನಮ್ಮ ಜನರು ಈಜಿಪ್ಟಿನಿಂದ ಹೊರಟು ಬಂದಾಗ ಸರ್ವೇಶ್ವರ ನಮಗೋಸ್ಕರ ಮಾಡಿದ ಉಪಕಾರವನ್ನು ಸ್ಮರಿಸುವುದಕ್ಕಾಗಿ ಈ ಆಚರಣೆಯನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಬೇಕು. ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದ್ದರಿಂದ ಅವರ ನಿಯಮ ನಮ್ಮ ಬಾಯಿಗೆ ಬರುತ್ತಿರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.