Exodus 15:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ಕೈಗಳಲ್ಲಿ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯ ಹಿಂದೆ ಹೋದರು.
Kannada BSI Bible 2016
ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರೋನನ ಅಕ್ಕನಾದ ವಿುರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ನಾಟ್ಯವಾಡುತ್ತಾ ಆಕೆಯ ಹಿಂದೆ ಹೋಗುತ್ತಿರಲು
Kannada Bible (KNCL) BSI 2016
ಆರೋನನ ಅಕ್ಕ ಮಿರ್ಯಾಮಳು ಒಬ್ಬ ಪ್ರವಾದಿನಿ. ಆಕೆ ತಮ್ಮಟೆಯನ್ನು ಕೈಗೆ ತೆಗೆದುಕೊಂಡಳು. ಮಹಿಳೆಯರೆಲ್ಲರು ತಮ್ಮಟೆ ಹಿಡಿದು ನಾಟ್ಯವಾಡುತ್ತಾ ಆಕೆಯ ಹಿಂದೆ ಹೊರಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯನ್ನು ಹಿಂಬಾಲಿಸಿ ಹೊರಹೊರಟರು.