Exodus 18:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇತ್ರೋನನು ಮೋಶೆಯ ಇಬ್ಬರು ಗಂಡುಮಕ್ಕಳನ್ನೂ ಕರೆದುಕೊಂಡು ಬಂದನು. ಮೊದಲಿನ ಮಗನ ಹೆಸರು ಗೇರ್ಷೋಮ್. ಅವನು ಹುಟ್ಟಿದಾಗ ಮೋಶೆಯು, “ನಾನು ಪರದೇಶದಲ್ಲಿ ಅಪರಿಚಿತನಾಗಿದ್ದೇನೆ” ಎಂದು ಹೇಳಿ ಆ ಹೆಸರನ್ನು ಇಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಪುತ್ರರಲ್ಲಿ ಒಬ್ಬನಿಗೆ “ ಗೇರ್ಷೋಮ್” ಎಂದು ಹೆಸರಿಟ್ಟನು. ಏಕೆಂದರೆ ಮೋಶೆಯು, “ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆ” ಎಂದು ಹೇಳಿದನು.
Kannada BSI Bible 2016
ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಶೆ - ನಾನು ಅನ್ಯದೇಶದ ಪ್ರವಾಸಿಯಾಗಿದ್ದೇನೆಂದು ಹೇಳಿ ತನ್ನ ಹಿರೀ ಮಗನಿಗೆ ಗೇರ್ಷೋಮೆಂದು ಹೆಸರಿಟ್ಟಿದ್ದನು;
Kannada Bible (KNCL) BSI 2016
ಮೋಶೆ ತಾನು ಅನ್ಯದೇಶದ ಪ್ರವಾಸಿ ಎಂದು ಹೇಳಿ ತನ್ನ ಹಿರಿಯ ಮಗನಿಗೆ ‘ಗೇರ್ಷೋಮ್’ ಎಂದು ಹೆಸರಿಟ್ಟಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯು, “ನಾನು ಪರದೇಶದಲ್ಲಿ ಅನ್ಯನಾಗಿದ್ದೆನು,” ಎಂದು ಹೇಳಿ ಆ ಪುತ್ರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿಟ್ಟಿದ್ದನು.