Exodus 18:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ಮೋಶೆಯು ಮರುಭೂಮಿಯಲ್ಲಿ ದೇವರ ಬೆಟ್ಟವಾದ ಸೀನಾಯ್ ಬೆಟ್ಟದ ಬಳಿ ತಂಗಿದ್ದಾಗ ಇತ್ರೋನನು ಮೋಶೆಯ ಬಳಿಗೆ ಹೋದನು. ಇತ್ರೋನನ ಜೊತೆಯಲ್ಲಿ ಮೋಶೆಯ ಹೆಂಡತಿ ಮತ್ತು ಅವನ ಇಬ್ಬರು ಗಂಡುಮಕ್ಕಳು ಇದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋಶೆಯ ಮಾವನಾದ ಇತ್ರೋವನು ಮೋಶೆಯ ಮಕ್ಕಳನ್ನು, ಹೆಂಡತಿಯನ್ನು ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
Kannada BSI Bible 2016
ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಶೆಯ ಮಾವನಾದ ಇತ್ರೋವನು ಮೋಶೆಯ ಮಕ್ಕಳನ್ನೂ ಹೆಂಡತಿಯನ್ನೂ ಕರೆದುಕೊಂಡು ಅರಣ್ಯದಲ್ಲಿ ದೇವರ ಬೆಟ್ಟದ ಹತ್ತಿರ ಇಳುಕೊಂಡಿದ್ದ ಮೋಶೆಯ ಬಳಿಗೆ ಬಂದನು.
Kannada Bible (KNCL) BSI 2016
ಮೋಶೆಯ ಮಾವ ಇತ್ರೋ, ಮೋಶೆಯ ಮಕ್ಕಳನ್ನೂ ಹೆಂಡತಿಯನ್ನೂ ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯ ಮಾವನಾದ ಇತ್ರೋವನ ಸಂಗಡ ಮೋಶೆಯ ಹೆಂಡತಿಯನ್ನೂ, ಅವನ ಪುತ್ರರನ್ನೂ ಮೋಶೆಯ ಬಳಿಗೆ ಅವನು ತಂಗಿದ್ದ ಮರುಭೂಮಿಯಲ್ಲಿ ದೇವರ ಬೆಟ್ಟದ ಬಳಿಗೆ ಬಂದರು.