Exodus 20:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಲ್ಲದೆ ಯಜ್ಞವೇದಿಕೆಯನ್ನು ಹತ್ತುವುದಕ್ಕೆ ಮೆಟ್ಟಲುಗಳನ್ನು ಮಾಡಬಾರದು. ಮೆಟ್ಟಲುಗಳಿದ್ದರೆ ಜನರು ತಲೆ ಎತ್ತಿ ಯಜ್ಞವೇದಿಕೆಯನ್ನು ನೋಡುವಾಗ ನಿಮ್ಮ ರಹಸ್ಯಾಂಗವು ಕಾಣಿಸೀತು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಲ್ಲದೆ ನನ್ನ ಯಜ್ಞವೇದಿಯನ್ನು ನಿಮ್ಮ ನಗ್ನತೆಯು ಕಾಣುವ ಹಾಗೆ ಮೆಟ್ಟಲುಗಳನ್ನು ಬಳಸಿ ಅದನ್ನು ಹತ್ತಬಾರದು’” ಎಂದು ಆಜ್ಞಾಪಿಸಿದನು.
Kannada BSI Bible 2016
ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಲ್ಲದೆ ನನ್ನ ಯಜ್ಞವೇದಿಯನ್ನು ಮೆಟ್ಲುಗಳಿಂದ ಏರಕೂಡದು; ಹಾಗೆ ಏರಿದರೆ ನಿಮ್ಮ ರಹಸ್ಯಾಂಗವು ಕಾಣಿಸೀತು.
Kannada Bible (KNCL) BSI 2016
ನೀವು ನನಗಾಗಿ ಕಲ್ಲಿನಿಂದ ಬಲಿಪೀಠವನ್ನು ಕಟ್ಟಬೇಕಾದರೆ ಕೆತ್ತಿರುವ ಕಲ್ಲುಗಳಿಂದ ಕಟ್ಟಕೂಡದು. ಏಕೆಂದರೆ ಉಳಿ ಮುಂತಾದುದನ್ನು ಉಪಯೋಗಿಸಿದರೆ ಅದು ಅಪವಿತ್ರವಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನಗಾಗಿ ಬಲಿಪೀಠದ ಮೇಲೆ ಹೋಗಲು ಹತ್ತುವಾಗ ನಿನ್ನ ಬೆತ್ತಲೆತನ ಕಾಣಬಾರದು. ಅದರ ಮೆಟ್ಟಲುಗಳನ್ನು ಹತ್ತಬಾರದು,’ ಎಂದು ಹೇಳಿದರು.