Exodus 22:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾಗಲಿ, ಎತ್ತನ್ನಾಗಲಿ, ಕುರಿಯನ್ನಾಗಲಿ ಬೇರೆ ಯಾವ ಪಶುವನ್ನಾಗಲಿ ಕಾಪಾಡುವುದಕ್ಕೆ ಕೊಟ್ಟಿದ್ದು, ಅದು ಸತ್ತರೆ ಇಲ್ಲವೆ ಗಾಯಗೊಂಡರೆ ಇಲ್ಲವೆ ಯಾರೂ ತಿಳಿಯದಂತೆ ಕಳ್ಳತನವಾದರೆ,
Kannada BSI Bible 2016
ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶು ವನ್ನಾದರೂ ಕಾಯುವದಕ್ಕೆ ಕೊಟ್ಟಾಗ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ನೋಡದೆ ಇದ್ದಾಗ ಓಡಿಸಿಕೊಂಡು ಹೋದರೆ
Kannada BSI JV (ಕನ್ನಡ ಸತ್ಯವೇದವು J.V. (BSI))
ಒಬ್ಬನು ಕತ್ತೆಯನ್ನಾಗಲಿ ಎತ್ತನ್ನಾಗಲಿ ಕುರಿಯನ್ನಾಗಲಿ ಬೇರೆ ಯಾವ ಪಶುವನ್ನಾಗಲಿ ಕಾಪಾಡುವದಕ್ಕೆ ಮತ್ತೊಬ್ಬನ ವಶಕ್ಕೆ ಕೊಟ್ಟ ಮೇಲೆ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ
Kannada Bible (KNCL) BSI 2016
“ಒಬ್ಬನು ಮತ್ತೊಬ್ಬನ ಕತ್ತೆಯನ್ನಾಗಲಿ ಎತ್ತನ್ನಾಗಲಿ ಕುರಿಯನ್ನಾಗಲಿ, ಬೇರೆ ಯಾವ ಪ್ರಾಣಿಯನ್ನೇ ಆಗಲಿ ತನ್ನ ಬಳಿಯಿಂದ ಸುರಕ್ಷಿತವಾಗಿಟ್ಟುಕೊಳ್ಳಲು ಒಪ್ಪಿಕೊಂಡ ಮೇಲೆ ಅದು ಸತ್ತರೆ, ಗಾಯಗೊಂಡರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶುವನ್ನಾದರೂ ಕಾಯುವುದಕ್ಕೆ ಕೊಟ್ಟಾಗ, ಅದು ಸತ್ತರೆ, ಇಲ್ಲವೆ ಊನವಾದರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ,