Exodus 22:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲಿಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಬ್ಬನು ಮತ್ತೊಬ್ಬನಿಂದ ಪಶುವನ್ನು ಸ್ವಲ್ಪ ಕಾಲಕ್ಕೆ ಬಾಡಿಗೆಗೆ ತೆಗೆದುಕೊಂಡಿರಲಾಗಿ ಆ ಪಶುವಿನ ಒಡೆಯನು ಅದರ ಹತ್ತಿರವಿಲ್ಲದ ಸಮಯದಲ್ಲಿ ಅದು ಗಾಯಗೊಂಡರೆ ಇಲ್ಲವೆ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.
Kannada BSI Bible 2016
ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಾಗಿತಕ್ಕೊಂಡಿರಲಾಗಿ ಒಡೆಯನು ಅದರ ಹತ್ತಿರ ಇಲ್ಲದಿ ರುವಾಗ ಆ ಪಶುವು ಊನವಾದರೆ ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಬದಲು ಕೊಡ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಬ್ಬನು ಮತ್ತೊಬ್ಬನಿಂದ ಪಶುವನ್ನು ಸ್ವಲ್ಪಕಾಲಕ್ಕೆ ತೆಗೆದುಕೊಂಡಿರಲಾಗಿ ಆ ಪಶುವಿನ ಒಡೆಯನು ಅದರ ಹತ್ತಿರವಿಲ್ಲದ ಸಮಯದಲ್ಲಿ ಅದು ಊನವಾದರೆ ಇಲ್ಲವೆ ಸತ್ತರೆ ಕೇಳಿಕೊಂಡವನು ಈಡುಕೊಡಬೇಕು.
Kannada Bible (KNCL) BSI 2016
“ಒಬ್ಬನು ಮತ್ತೊಬ್ಬನಿಂದ ಪಶುಪ್ರಾಣಿಯನ್ನು ಕೊಂಚಕಾಲಕ್ಕೆ ಎರವಲಾಗಿ ತೆಗೆದುಕೊಂಡಿರುವಾಗ ಆ ಪ್ರಾಣಿಯ, ಒಡೆಯನು ಹತ್ತಿರವಿಲ್ಲದ ಸಮಯದಲ್ಲಿ ಗಾಯಗೊಂಡರೆ ಅಥವಾ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಲಾಗಿ ತೆಗೆದುಕೊಂಡಿರಲಾಗಿ ಅದರ ಒಡೆಯನು ಅದರ ಹತ್ತಿರ ಇಲ್ಲದಿರುವಾಗ, ಆ ಪಶುವಿಗೆ ಊನವಾದರೆ, ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಈಡು ಕೊಡಬೇಕು.