Exodus 23:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದಲ್ಲಿ ನೇಮಕವಾದ ಕಾಲದಲ್ಲಿ ಏಳು ದಿನವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ತಿಂಗಳಲ್ಲಿಯೇ ಐಗುಪ್ತ ದೇಶದಿಂದ ಹೊರಟು ಬಂದ ನೆನಪಿಗಾಗಿ ಇದನ್ನು ಆಚರಿಸಬೇಕು. ಕೈಯಲ್ಲಿ ಕಾಣಿಕೆಯಿಲ್ಲದೆ ಬರಿಗೈಯಲ್ಲಿ ನನ್ನ ಸನ್ನಿಧಿಗೆ ಯಾರು ಬರಬಾರದು.
Kannada BSI Bible 2016
ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.)
Kannada BSI JV (ಕನ್ನಡ ಸತ್ಯವೇದವು J.V. (BSI))
ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದ ನೇಮಕವಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ಮಾಸದಲ್ಲೇ ಐಗುಪ್ತದೇಶದಿಂದ ಹೊರಟುಬಂದಿರಲ್ಲಾ. ಒಬ್ಬನೂ ಕೈಯಲ್ಲಿ ಕಾಣಿಕೆಯಿಲ್ಲದೆ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಕೂಡದು.
Kannada Bible (KNCL) BSI 2016
ಹುಳಿಯಿಲ್ಲದ ರೊಟ್ಟಿ ತಿನ್ನುವ ಹಬ್ಬ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರಮಾಸದ ನಿಗದಿಯಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಏಕೆಂದರೆ ಆ ಮಾಸದಲ್ಲೇ ನೀವು ಈಜಿಪ್ಟಿನಿಂದ ಹೊರಟುಬಂದದ್ದು. ನನ್ನ ಸನ್ನಿಧಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯಿಲ್ಲದೆ ಬರೀ ಕೈಯಲ್ಲಿ ಬರಕೂಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ಅಬೀಬ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳವರೆಗೆ ನಾನು ನಿಮಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಆ ತಿಂಗಳಲ್ಲೇ ಈಜಿಪ್ಟಿನಿಂದ ಹೊರಗೆ ಬಂದಿದ್ದೀರಿ. “ಒಬ್ಬರೂ ಕಾಣಿಕೆಯಿಲ್ಲದೆ ಬರಿಗೈಯಿಂದ ನನ್ನ ಸನ್ನಿಧಿಗೆ ಬರಬಾರದು.