Exodus 23:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪಶುವಿನ ಕೊಬ್ಬನ್ನು ಮರುದಿನದವರೆಗೆ ಇಡಲೇಬಾರದು.
Kannada BSI Bible 2016
ನನಗೆ ಸಮರ್ಪಿಸುವ ಯಜ್ಞದ ರಕ್ತವನ್ನು ಹುಳಿ ಇರುವ ರೊಟ್ಟಿಯ ಸಂಗಡ ಅರ್ಪಿಸಬಾರದು ಇಲ್ಲವೆ ನನಗೆ ಅರ್ಪಿಸಿದ ಯಜ್ಞದ ಕೊಬ್ಬು ಬೆಳಗಿನ ವರೆಗೆ ಇರಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಜಾತ್ರೆಯಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪಶುವಿನ ವಪೆಯನ್ನು ಮಾರಣೆ ದಿನದವರೆಗೂ ಇಡಲೇಬಾರದು.
Kannada Bible (KNCL) BSI 2016
“ನನಗೆ ಬಲಿಯನ್ನು ಅರ್ಪಿಸುವಾಗ ಆ ಬಲಿ ಪ್ರಾಣಿಯ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪ್ರಾಣಿಯ ಕೊಬ್ಬನ್ನು ಮಾರನೆಯ ದಿನದವರೆಗೂ ಇಡಲೇಕೂಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. “ಯಾವುದೇ ಹಬ್ಬದ ಅರ್ಪಣೆಯಲ್ಲಿ ಕೊಬ್ಬನ್ನು ಬೆಳಗಿನವರೆಗೆ ಇಟ್ಟುಕೊಳ್ಳಬಾರದು.