Exodus 23:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ದೇಶದಲ್ಲಿ ಗರ್ಭಪಾತವಾಗಲಿ, ಬಂಜೆತನವಾಗಲಿ ಇರುವುದೇ ಇಲ್ಲ. ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ದಯಪಾಲಿಸುವೆನು.
Kannada BSI Bible 2016
ಗರ್ಭಸ್ರಾವವಾಗಲಿ ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವದಿಲ್ಲ; ನಿನ್ನ ದಿನಗಳ ಲೆಕ್ಕವನ್ನು ಪೂರ್ತಿಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ದೇಶದಲ್ಲಿ ಗರ್ಭಸ್ರಾವವಾಗಲಿ ಬಂಜೇತನವಾಗಲಿ ಇರುವದೇ ಇಲ್ಲ; ನಿಮಗೆ ಸಂಪೂರ್ಣವಾದ ಆಯುಸ್ಸನ್ನು ಕೊಡುವೆನು.
Kannada Bible (KNCL) BSI 2016
ನಿಮ್ಮ ನಾಡಿನಲ್ಲಿ ಗರ್ಭಸ್ರಾವವಾಗಲಿ ಬಂಜೆತನವಾಗಲಿ ಇರುವುದಿಲ್ಲ. ನಿಮಗೆ ಪೂರ್ಣವಾದ ಆಯುಸ್ಸನ್ನು ಕೊಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗರ್ಭ ಸ್ರಾವವಾಗಲಿ, ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವುದಿಲ್ಲ. ನಾನು ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ಅನುಗ್ರಹಿಸುವೆನು.