Exodus 24:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ತೇಜಸ್ಸು ಸೀನಾಯಿಬೆಟ್ಟದ ಮೇಲೆ ನೆಲೆಗೊಂಡಿತ್ತು ಮತ್ತು ಆ ಮೇಘವು ಆರು ದಿನಗಳ ವರೆಗೂ ಬೆಟ್ಟವನ್ನು ಆವರಿಸಿಕೊಂಡಿತ್ತು. ಏಳನೆಯ ದಿನದಲ್ಲಿ ಯೆಹೋವನು ಮೇಘದೊಳಗಿನಿಂದ ಮೋಶೆಯನ್ನು ಕೂಗಿ ಕರೆದನು.
Kannada BSI Bible 2016
ಇದ ಲ್ಲದೆ ಕರ್ತನ ಮಹಿಮೆಯು ಸೀನಾಯಿಬೆಟ್ಟದ ಮೇಲೆ ನೆಲೆಯಾಗಿದದ್ದರಿಂದ ಮೇಘವು ಅದನ್ನು ಆರು ದಿನಗಳ ವರೆಗೆ ಮುಚ್ಚಿಕೊಂಡಿತು; ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ತೇಜಸ್ಸು ಸೀನಾಯಿ ಬೆಟ್ಟದ ಮೇಲೆ ನಿಂತಿತು, ಮತ್ತು ಆ ಮೇಘವು ಆರು ದಿನಗಳವರೆಗೂ ಬೆಟ್ಟವನ್ನು ಮುಚ್ಚಿಕೊಂಡಿತ್ತು. ಏಳನೆಯ ದಿನದಲ್ಲಿ ಯೆಹೋವನು ಮೇಘದೊಳಗಿಂದ ಕೂಗಿ ಮೋಶೆಯನ್ನು ಕರೆದನು.
Kannada Bible (KNCL) BSI 2016
ಸರ್ವೇಶ್ವರ ತೇಜಸ್ಸು ಸೀನಾಯಿ ಬೆಟ್ಟದ ಮೇಲೆ ನಿಂತಿತು. ಆ ಮೇಘವು ಆರು ದಿನಗಳವರೆಗೂ ಬೆಟ್ಟವನ್ನು ಆವರಿಸಿತ್ತು. ಏಳನೆಯ ದಿನ ಸರ್ವೇಶ್ವರ ಮೇಘ ಮಧ್ಯೆಯಿಂದ ಮೋಶೆಯನ್ನು ಕೂಗಿ ಕರೆದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.